ಸಾಗರ : ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ಜಿಲ್ಲಾ ಶಾಖೆ ವತಿಯಿಂದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ೧೦ ವರ್ಷಗಳಿಂದ ಕೇಂದ್ರ ಸರ್ಕಾರ ಗೌರವಧನ ಹೆಚ್ಚಿಸದ ಕಾರಣದಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬದುಕು ತೀವೃ ಸಂಕಷ್ಟದಲ್ಲಿದೆ ನಿವೃತ್ತ ವೇತನ, ಗ್ರಾಜ್ಯುಯಿಟಿ ಹಾಗೂ ಆರೋಗ್ಯ ವಿಮೆ ಒದಗಿಸುವ ಜೊತೆಗೆ ಗೌರವಧನ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆರೋಗ್ಯವಿಮೆ ಒದಗಿಸಬೇಕು. ಪೋಷಣ ಕಾರ್ಯಕ್ರಮದಲ್ಲಿ ಮೊಬೈಲ್ ಹಣ ಹೆಚ್ಚಳ ಮಾಡಿ ಬೆಲೆ ಏರಿಕೆಗೆ ತಕ್ಕಂತೆ ಗುಣಮಟ್ಟದ ಮೊಬೈಲ್ ಖರೀದಿಗೆ ಅನುದಾನ ಒದಗಿಸಿ ಕೊಡಬೇಕು.
ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಯನ್ನು ತಕ್ಷಣ ಈಡೇರಿಸುವ ಮೂಲಕ ಅವರ ಬದುಕು ಹಸನಾಗಿಸುವತ್ತ
ಗಮನ ಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಎನ್.ರವೀಂದ್ರ ಸಾಗರ್, ಜಿಲ್ಲಾಧ್ಯಕ್ಷೆ ವಿಶಾಲ, ಪ್ರಮುಖರಾದ ಸುಶೀಲಾ ಬಾಯಿ, ವೇದಾವತಿ, ಪುಷ್ಪ, ಗಾಯತ್ರಿ ಹೆಗಡೆ, ಶಶಿಕಲಾ, ಲೀಲಾವತಿ, ಕುಸುಮ, ಕಲಾವತಿ, ಜಯ ಇನ್ನಿತರರು ಹಾಜರಿದ್ದರು.