ಸಾಂಧರ್ಬಿಕ ಚಿತ್ರ

ಶಿವಮೊಗ್ಗ,ಜ.8:
ಶ್ವಾನ ಪ್ರದರ್ಶನದಲ್ಲಿ ಪ್ರೇಕ್ಷಕನ ಮೇಲೆ ರಾಟ್ ವೀಲರ್ ಎಂಬ ನಾಯಿಯು ಮನಸೋ ಇಚ್ಛೆ ದಾಳಿ ನಡೆಸಿದೆ.


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ಇದರಲ್ಲಿ, ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಟ್ ವಿಲರ್ ಜಾತಿಯ ನಾಯಿ ಶರತ್ ಎನ್ನುವವರ ಮೇಲೆ ಮನಸೊ ಇಚ್ಛೆ ದಾಳಿ ಮಾಡಿದೆ.
ಡಾಗ್ ಶೋ ನೋಡಲು ಬಂದ ಪ್ರೇಕ್ಷಕ ಶರತ್ ರಿಗೆ ಕೂಡ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೆ ವೇಳೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಆಯೋಜಕರು ಹಿಂದೇಟು ಹಾಕಿದಾಗ ಶರತ್ ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಘಟನೆ ನಡೆದ ನಂತರ ಆಯೋಜಕರ ವಿರುದ್ಧ ಗಾಯಾಳು ಆಕ್ರೋಶ ವ್ಯಕ್ತಪಡಿಸಿದ್ದು, 11 ಬಾರಿ ದಾಳಿ ನಡೆಸಿದ ನಾಯಿಯನ್ನು ಶ್ವಾನ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದು ದೊಡ್ಡ ತಪ್ಪಾಗಿದ್ದು ನನ್ನ ಮೇಲೆ ನಾಯಿ ದಾಳಿ ಮಾಡಿದ ನಂತರ ಸ್ಥಳದಲ್ಲಿ ಯಾವುದೇ ರೀತಿಯಾದ ವೈದ್ಯಕೀಯ ವ್ಯವಸ್ಥೆ ಹಾಗೂ ಅಂಬುಲೆನ್ಸ್ ಕೂಡ ಇರಲಿಲ್ಲ. ಹೀಗಾಗಿ ನಾನು ಆಸ್ಪತ್ರೆಗೆ ದಾಖಲಾಗಲು ತಡವಾಯಿತು ಎಂದು ಆಯೋಜಕರ ವಿರುದ್ಧ ಶರತ್ ಆಕ್ರೋಶ ಹೊರಹಾಕಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!