ಶಿವಮೊಗ್ಗ ನಗರ ಜೆಡಿಎಸ್ ಘಟಕದ ಅಧ್ಯಕ್ಷ ರಾಗಿ ನೇಮಕಗೊಂಡು ನಾಳೆ ಅಧಿಕಾರ ಸ್ವೀಕರಿಸಲಿ ರುವ ದೀಪಕ್ಸಿಂಗ್ ಅವರು ಇರುವ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಉದ್ಯೋಗ ಮಾಡಬೇ ಕೆಂದು ಬಂದ ಯುವಕ. ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರ ಮೂಲಕ ಕಳೆದ ೧೫ ವರ್ಷಗಳಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿದ ದೀಪಕ್ ಸಿಂಗ್ ಬಿಎಸ್ಸಿ ಪಧವೀಧರ.
ಕಳೆದ ೩೦ ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ಇರುವ ಅವರು ಪ್ರಸಿದ್ದ ಬಿಪಿಎಲ್ ಸಂಸ್ಥೆಯಲ್ಲಿ ಆರ್ಎನ್ಡಿ (ರಿಸರ್ಚ್ ಅಂಡ್ ಡೆವಲಪ್ ಮೆಂಟ್) ವಿಭಾಗದ ಕೆಲಸ ಮಾಡುತ್ತಿದ್ದು, ಎಲೆಕ್ಟ್ರೇಷನ್ ವಿಭಾಗದಲ್ಲಿ ಸ್ವಂತ ಉದ್ಯೋಗದ ಕನಸ್ಸು ಹೊತ್ತು ಬಂದಿದ್ದರು
. ಸಾಮಾಜಿಕ ಜಾಲತಾಣಗಳ ಬಗ್ಗೆ ಸೂಕ್ತ ಅರಿವು ಹಾಗೂ ಪ್ರಜ್ಞೆ ಹೊಂದಿರುವ ದೀಪಕ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಾಮಾ ಜಿಕ ಜಾಲತಾಣ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ಐದು ಜಿಲ್ಲೆಗಳ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನೋಡಿಕೊಂಡ ಹಿರಿಮೆ ಹೊಂದಿ ದ್ದಾರೆ. ಅಂದು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಾಮಾಜಿಕ ಮಾದ್ಯಮಗಳ ಬಳಕೆ ಅಷ್ಟೊಂದು ದೊಡ್ಡಪ್ರಮಾಣಲ್ಲಿ ಇರಲಿಲ್ಲ. ಅದಕ್ಕೊಂದು ರೂಪುರೇಶು ನೀಡುವುದರಲ್ಲಿ ರಾಜ್ಯದ ಪ್ರಮುಖರಲ್ಲಿ ದೀಪಕ್ಸಿಂಗ್ ಸಹ ಒಬ್ಬರು ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಹಿಂದೆ ಶಾಸಕರಾಗಿದ್ದ ಕೆ.ಬಿ.ಪ್ರಸನ್ನಕುಮಾರ್ ಅವರ ಸ್ನೇಹದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿದ ದೀಪಕ್ಸಿಂಗ್ ಅವರ ತಂದೆ ರಾಮಚಂದ್ರ ಸಿಂಗ್ ಅವರು ಎಸ್ಬಿಎಂನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ವಿದ್ಯಾಸಿಂಗ್, ಮಕ್ಕಳಾದ ರಾಹುಲ್ಸಿಂಗ್, ಪ್ರಜ್ವಲ್ ಸಿಂಗ್ ಅವರೊಂದಿಗೆ ಸುಂದರ ಕುಟುಂಬದ ಹೊಣೆ ಗಾರಿಕೆಯ ಜೊತೆಗೆ ರಾಜಕಾರಣದಲ್ಲಿ ಗುರುತಿಸಿಕೊ ಳ್ಳುವ ಆಸೆಯಿಂದ ಬಂದಾಗ ಕಾಂಗ್ರೆಸ್ ಪಕ್ಷ ಅವರ ಸೇವೆಯನ್ನು ಗಮನಿಸಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಿತ್ತು. ಈ ಅವಧಿಯಲ್ಲಿ ಅಂದಿನ ಶಾಸಕರೂ ಆಗಿದ್ದ ಕೆ.ಬಿ.ಪ್ರಸನ್ನ ಕುಮಾರ್ ಅವರ ನೆರವಿನೊಂದಿಗೆ ವಿನೋಭನಗರದ ಅಭಿವೃದ್ದಿ ಟೊಂಕ ಕಟ್ಟಿದ್ದರು ಇದೇ ಸಂದರ್ಭದಲ್ಲಿ ಐದು ಸಮುದಾಯ ಭವನಗಳನ್ನು ಅಲ್ಲಿಯೇ ಮಾಡಿಸಿದ ಹೆಸರು ಅವರದು.
ಕೊರೊನಾ ಸಂದರ್ಭದಲ್ಲಿ ಕೆ.ಬಿ.ಪ್ರಸನ್ನಕುಮಾರ್ ಅವರ ಜೊತೆಗೂಡಿ ಶಿವಮೊಗ್ಗ ನಗರದ ಉತ್ತರ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದ ದೀಪಕ್ಸಿಂಗ್ ಮನೆ ಮನೆಗೆ ಭೇಟಿ ನೀಡಿ ಅವರಿಗೆ ವ್ಯಾಕ್ಸಿನ್ ಕೊಡಿಸುವುದು, ಊಟದ ವ್ಯವಸ್ಥೆ ಮಾಡಿಸುವುದು ಸೇರಿದಂತೆ ಹತ್ತು ಹಲವು ಮಹತ್ತರ ಕಾರ್ಯಗಳನ್ನು ಅವರ ತಂಡ ಮಾಡಿತ್ತು. ಪ್ರಸನ್ನಕುಮಾರ್ ಅವರ ಸೌರಭ ಸಂಸ್ಥೆಯ ಜೊತೆಗೂಡಿ ಈಗಲೂ ಬಡ ಮಕ್ಕಳಿಗೆ, ಬಡವರಿಗೆ ನಿರಂತರವಾಗಿ ಸಹಾಯ ಹಸ್ತ ಕೊಡಿಸುವ, ಕೊಡುವ ಕಾರ್ಯ ಮಾಡುತ್ತಿದ್ದಾರೆ.
ಪ್ರಸನ್ನಕುಮಾರ್ ಜೆಡಿಎಸ್ ಸೇರ್ಪಡೆಗೊಂಡ ನಂತರ ಅವರೊಂದಿಗೆ ಜೆಡಿಎಸ್ಗೆ ಬಂದ ದೀಪಕ್ಸಿಂಗ್ ಅವರಿಗೆ ಈಗೊಂದು ಜವಾಬ್ದಾರಿಯ ಸ್ಥಾನ ಸಿಕ್ಕಿದೆ.
ಹಿಂದಿನ ಅನುಭವ ಹಾಗೂ ಗೆಳೆಯರ ಅಪಾರ ತಂಡದ ಮೂಲಕ ಜಾತ್ಯಾತೀತ ಜನತಾದಳವನ್ನು ಬುಡಮಟ್ಟದಿಂದ ಕಟ್ಟಲು ನಿರ್ಧರಿಸಿದ್ದೇವೆ. ಈಗಾಗಲೇ ಶಿವಮೊಗ್ಗ ನಗರದ ಎಲ್ಲೆಡೆ ಭೇಟಿ ನೀಡುತ್ತಾ, ಮೂಲ ಜೆಡಿಎಸ್ನಲ್ಲಿದ್ದವರು, ರಾಜಕಾರಣದಿಂದ ದೂರ ಇರುವಂತಹವರನ್ನು ಗುರುತಿಸಿ ಅವರನ್ನು ಭೇಟಿ ಮಾಡಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸುತ್ತಿದ್ದೇವೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಿನ ನಮ್ಮ ನಗರ ಘಟಕದಲ್ಲಿ ಎಲ್ಲ ಜಾತಿ ಧರ್ಮಗಳ ನಾಯಕರುಗಳನ್ನು ಕ್ರೂಢೀಕರಿಸಲಾಗಿದೆ. ಸುಮಾರು ೨೫೦ಕ್ಕೂ ಹೆಚ್ಚು ಸಕ್ರೀಯ ನಾಯಕರನ್ನು ನಗರದಲ್ಲಿ ರೂಪಿಸಲಾಗಿದೆ. ನಮ್ಮ ಘಟಕದ ಎಕ್ಸಿಕ್ಯೂಟಿವ್ ತಂಡದಲ್ಲಿರುವ ೨೫ ನಾಯಕರಲ್ಲಿ ಎಲ್ಲಾ ಬಗೆಯ ಪ್ರತಿಭಾನ್ವಿತ ರಾಜಕಾರಣಿಗಳಿದ್ದಾರೆ. ಹಿರಿಯರಿಗೆ ಹೆಚ್ಚು ಅವಕಾಶಗಳನ್ನು ನೀಡಲಾಗಿದೆ. ಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಮೊಗ್ಗ ನಗರದ ಎಲ್ಲಾ ಕಡೆ ಸ್ಪರ್ಧಿಸಿ ಅತಿ ಹೆಚ್ಚು ಪೈಪೋಟಿ ನೀಡುವ ಜೊತೆಗೆ ಹೆಚ್ಚು ಸ್ಥಾನವನ್ನು ಗೆಲ್ಲಿಸುವ ಉದ್ದೇಶ ಹೊಂದಿದ್ದೇವೆ.
-ದೀಪಕ್ಸಿಂಗ್, ನಗರಾಧ್ಯಕ್ಷ,
ಶಿವಮೊಗ್ಗ ಜೆಡಿಎಸ್.