ಶಿವಮೊಗ್ಗ,ನ.೨೮: ಅರಣ್ಯ ಇಲಾಖೆಗೆ ದ್ರೋಹ ಬಗೆದಿರುವ ಭದ್ರಾವತಿ ವಲಯದ ಆರ್‌ಎಫ್‌ಒ ರಾಜೇಶ್ ಕೆ.ಆರ್. ಅವರು ಮೇಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ದರ್ಪ ತೋರಿಸಿರುವ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆರ್. ಪ್ರಕಾಶ್ ಲಿಗಾಡಿ ಒತ್ತಾಯಿಸಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜೇಶ್ ಕೆ.ಆರ್.ಅವರು ಎಂಪಿಎಂ ನಡುತೋಪಿನಲ್ಲಿ ನೀಲಗಿರಿ ಮರಗಳನ್ನು ಅನಧೀಕೃತವಾಗಿ ಯಾವುದೇ ಆದೇಶವಿಲ್ಲದೆ ಮರಗಳನ್ನು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದು, ಮೇಲಾಧಿಕಾರಿಗಳ ಗಮನಕ್ಕೆ ಬಂದು ರಾಜೇಶ್ ಅವರನ್ನು ವೈದ್ಯಕೀಯ ರಜೆ ಮೇಲೆ ಕಳುಹಿಸಿದ್ದರು ಎಂದರು.
ರಜೆ ಅವಧಿ ಮುಗಿಯುವ ಮುಂಚೆಯೇ ಮೇಲಾಧಿಕಾರಿಗಳ ಆದೇಶವಿಲ್ಲದೆ ನ.೨೪ರಂದು ಸಂಜೆ ತಮ್ಮ ಸಹಚರರೊಂದಿಗೆ ತಮ್ಮ ಕೊಠಡಿಗೆ ನುಗ್ಗಿ ಚೇರಿನ ಮೇಲೆ ಕುಳಿತುಕೊಂಡು ದರ್ಪ ತೋರಿಸಿದ್ದಾರೆ. ಇವರಿಗೆ ಅರಣ್ಯ ಸಚಿವರ, ಮೇಲಾಧಿಕಾರಿಗಳ ಎದರಿಕೆ ಇಲ್ಲದೆ ಕಾನೂನು ಲೋಪ ವೆಸಗಿದ್ದಾರೆ. ಅವರನ್ನು ರಜೆ ಮೇಲೆ ಕಳುಹಿಸಿ ಅವರ ಸ್ಥಾನಕ್ಕೆ ಅಧಿಕಾರಿ ದಿನೇಶ್ ಅವರನ್ನು ನೇಮಿಸಲಾಗಿತ್ತು.
ದಿನೇಶ್ ಅವರು ಬೇರೆ ಕರ್ತವ್ಯದ ಮೇಲೆ ಹೊರಗೆ ತೆರಳಿದಾಗ ರಾಜೇಶ್ ಏಕಾಏಕಿ ಕೊಠಡಿಗೆ ಪ್ರವೇಶಿಸಿ ಛೇರಿನ ಮೇಲೆ ಕುಳಿತ್ತಿದ್ದಾರೆ. ಆದ್ದರಿಂದ ಇವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ್, ರಾಜೇಶ್, ನಾರಾಯಣಮೂರ್ತಿ ಉಪಸ್ಥಿತರಿದ್ದರು.