ಶಿವಮೊಗ್ಗ: ಭದ್ರಾವತಿ ಸುತ್ತಮುತ್ತಲ ಹಳ್ಳಿಗಳ ಜನರ ನಿದ್ರೆ ಕೆಡಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ದಿನಗಳಿಂದ ಕಾರೇಹಳ್ಳಿ ಸುತ್ತಮುತ್ತ ಈ ಚಿರತೆ ಜನರಲ್ಲಿ ಭಯ ಹುಟ್ಟಿಸಿತ್ತು. ಅಲ್ಲದೆ ಗ್ರಾಮಗಳ ರಾಸುಗಳನ್ನು ಕೊಂದು ತಿಂದಿತ್ತು.
ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆಹಿಡಿಯಲು
ಹರಸಾಹಸ ಮಾಡಿದ್ದರು. ಜನರಿಗೆ ಕಾಟ ಕೊಡುತ್ತಿದ್ದ ಚಿರತೆ ಕೊನೆಗೂ ಭದ್ರಾವತಿ ಸಮೀಪದ ಕಾರೇಹಳ್ಳಿಯಲ್ಲಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.