ಶಿವಮೊಗ್ಗ ನವೆಂಬರ್ ೨೩,
ನ. ೨೪ ರಿಂದ ೨೬ ರವರೆಗೆ ಮಾಹಿತಿ ತಂತ್ರಜ್ಞಾನ ಸೇವೆಗೆ ಸಂಬಂಧಿಸಿದಂತೆ ತಂತ್ರಾಂಶ ಹಾಗೂ ಹಾರ್ಡ್ವೇರ್ ಉನ್ನತೀಕರಿಸಲಾಗುತ್ತಿದ್ದು, ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ,
ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ನಗರ ಹಾಗೂ ಪಟ್ಟಣದ ಪ್ರದೇಶಗಳಲ್ಲಿ ಮೂರು ದಿನ ಆನ್‌ಲೈನ್ ಆಧಾರಿತ ಸೇವೆ ಸ್ಥಗಿತಗೊಳಿಸಲಾಗುತ್ತಿರುವುದರಿಂದ
ನಗದು ಪಾವತಿ ಕೌಂಟರ್‌ಗಳಲ್ಲಿ ಆನ್‌ಲೈನ್ ಸೇವೆಗಳಾದ ಹೊಸ ವಿದ್ಯುತ್ ಸಂಪರ್ಕ, ಹೆಸರು ಬದಲಾವಣೆ, ನಗದು ಪಾವತಿ, ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ ಇತ್ಯಾದಿ ಸೇವೆಗಳು ಇರುವುದಿಲ್ಲ.
ಈ ಅವಧಿಯಲ್ಲಿ ವಿದ್ಯುತ್ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸಂಬಂಧಪಟ್ಟ ಗ್ರಾಹಕರು ಇದನ್ನು ಗಮನಿಸಿ ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.