*
ಶಿವಮೊಗ್ಗ, ಅಕ್ಟೋಬರ್ 31,
2023-24 ನೇ ಸಾಲಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.


     ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ಆನ್‍ಲೈನ್ ಅರ್ಜಿಗಳನ್ನು ಸಲಿಸಲು ದಿ: 31-11-2023 ಕಡೆಯ ದಿನವಾಗಿರುತ್ತದೆ.


     ವಿದ್ಯಾರ್ಥಿಗಳ ಪೊಷಕರ ವಾರ್ಷಿಕ ಆದಾಯವರು ರೂ. 6 ಲಕ್ಷಗಳ ಒಳಗಿದ್ದಲ್ಲಿ ಎರಡು ವರ್ಷಗಳ ಕೋರ್ಸ್‍ಗೆ ಗರಿಷ್ಟ ರೂ.20 ಲಕ್ಷಗಳ ಮಿತಿಯಲ್ಲಿ ವಿದ್ಯಾರ್ಥಿವೇತನ ಭರಿಸಲಾಗುವುದು(ಒಂದು ವರ್ಷಕ್ಕೆ ರೂ.10 ಲಕ್ಷಗಳಂತೆ). ಪೋಷಕರ ವಾರ್ಷಿಕ ಆದಾಯವು ರೂ.6 ಲಕ್ಷದಿಂದ ರೂ.15 ಲಕ್ಷಗಳ ಒಳಗಿದ್ದಲ್ಲಿ ಎರಡು ವರ್ಷಗಳ ಕೋರ್ಸ್‍ಗೆ ರೂ.10 ಲಕ್ಷಗಳ ಗರಿಷ್ಟ ಮಿತಿಯಲ್ಲಿ ವಿದ್ಯಾರ್ಥಿವೇತನ ಪಾವತಿಸುವುದು(ಒಂದು ವರ್ಷಕ್ಕೆ ರೂ.5 ಲಕ್ಷಗಳಂತೆ).


       ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೇಡ್, 5ನೇ ಪ್ಯಾರಲಲ್ ರಸ್ತೆ, ದುರ್ಗಿಗುಡಿ, ಶಿವಮೊಗ್ಗ ದೂ.ಸಂ: 08182-

220206 https://dom.karnataka.gov.in/shimoga/public ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!