ಶಿವಮೊಗ್ಗ: ನಾಡಹಬ್ಬ ದಸರಾವನ್ನು ಶಿವಮೊಗ್ಗ ನಗರದಲ್ಲಿ ಅತ್ಯಂತ ವೈಭವದಿಂದ, ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇಡೀ ರಾಜ್ಯದಲ್ಲಿ ದಸರಾ ಹಬ್ಬದ ಆಚರಣೆಯನ್ನು ಮೈಸೂರು ಹೊರತುಪಡಿಸಿದರೆ ಅತ್ಯಂತ ವಿಜೃಂಭಣೆಯಿಂದ ನಡೆಸುವುದು

ಶಿವಮೊಗ್ಗ ಜಿಲ್ಲೆಯಲ್ಲಿ.
ಮಹಾನಗರ ಪಾಲಿಕೆವತಿಯಿಂದ ದಸರಾ ಹಬ್ಬಕ್ಕೆ ವಿವಿಧ ಸಮಿತಿಗಳನ್ನು ಆಯೋಜನೆ ಮಾಡಲಾಗುತ್ತದೆ ಅದರ ಮೂಲಕ ಸಾರ್ವಜನಿಕರಿಗೆ ಅನೇಕ ಕಾರ್ಯಕ್ರಮಗಳನ್ನು ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಇದರಲ್ಲಿ ಭಾಗವಹಿಸಲೆಂದೇ ಅನೇಕ ಕಲಾವಿದರು

, ಕಲಾತಂಡಗಳು ತಯಾರಿಯನ್ನು ನಡೆಸಿಕೊಳ್ಳುತ್ತಾರೆ. ಆದರೆ ಈ ಬಾರಿ ಇವರೆಲ್ಲರಿಗೂ ನಿರಾಸೆಯಾಗಿದೆ..
ಹೌದು ಪ್ರತಿ ವ?ವೂ ಕೂಡ ದಸರಾ ಆರಂಭವಾಗುವ ಮುನ್ನ ಸಾರ್ವಜನಿಕರಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮಹಿಳಾ ದಸರಾ ಸಮಿತಿ, ಯುವ ದಸರಾ ಸಮಿತಿ, ಸಾಂಸ್ಕೃತಿಕ ದಸರಾ ಸಮಿತಿ, ರಂಗ ದಸರಾ ಸಮಿತಿ, ಆಹಾರ ದಸರಾ ಸಮಿತಿ ಸೇರಿದಂತೆ

ಯಾವ ಯಾವ ಸಮಿತಿಗೆ ಯಾರು ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ, ಆ ಸಮಿತಿಯಿಂದ ಏನೆಲ್ಲಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಆ ಕಾರ್ಯಕ್ರಮಗಳು ಎಲ್ಲಿ ನಡೆಯಲಿದೆ. ಈ ಎಲ್ಲ ಮಾಹಿತಿಗಳನ್ನು ತಿಳಿಸಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ರೀತಿಯಾದಂತಹ ನಿಖರವಾದ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಾಗಿಲ್ಲ.


ಇಂದಿನಿಂದ ಕೆಲವು ದಸರಾ ಸಮಿತಿಯಿಂದ ಕಾರ್ಯಕ್ರಮಗಳು, ಸ್ಪರ್ಧೆಗಳು ಆರಂಭವಾಗಿದೆ. ಆದರೆ ಮಾಹಿತಿಯ ಕೊರತೆಯಿಂದ ಭಾಗವಹಿಸಲು ಸಾಧ್ಯವಾಗಿಲ್ಲದೆ ಸಾರ್ವಜನಿಕರ ನಿರಾಸೆ ಒಳಗಾಗಿದ್ದಾರೆ. ಶಿವಮೊಗ್ಗ ನಗರ ಜನತೆಗಾಗಿ ಆಯೋಜನೆ ಮಾಡಿರುವ ದಸರಾ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಮತ್ತೊಂದೆಡೆ ಈ ಬಾರಿಯ ದಸರಾ ಕಾರ್ಯಕ್ರಮದ

ಆಹ್ವಾನ ಪತ್ರಿಕೆಯೇ ಇನ್ನೂ ಕೂಡ ಮುದ್ರಣವಾಗಿಲ್ಲ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿದೆ. ಇನ್ನಾದರೂ ಉಳಿದ ದಸರಾ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡಿ ಎಂಬುದು ಸಾರ್ವಜನಿಕರ ಅಪೇಕ್ಷೆ.

By admin

ನಿಮ್ಮದೊಂದು ಉತ್ತರ

error: Content is protected !!