ಶಿವಮೊಗ್ಗ, ಅ.07:
ಶಿವಮೊಗ್ಗ ರಾಗಿಗುಡ್ಡದಲ್ಲಿ ಕೆಲ ಕಿಡಿಗೇಡಿಗಳು ನಡೆಸಿದ ಗಲಾಟೆ ವಿಷಯದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದ ಇಲಾಖೆಗಳು ಸೂಕ್ತ ಕ್ರಮಕೈಗೊಂಡಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು ತಾವೇ ಗಲಭೆ ಸ್ಥಳದಲ್ಲಿ ಮೊಕ್ಕಾಂಹೂಡಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಂತಿಯುತವಾಗುತ್ತಿರುವ ಶಿವಮೊಗ್ಗದಲ್ಲಿ ಅದನ್ನು ಕದಡುವ ಪ್ರಯತ್ನವನ್ನು ಮಾಡದಿರಿ. ಶಿವಮೊಗ್ಗ ಜನರಿಗೆ ಅದು ಬೇಕಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ಹೊರಗಿನಿಂದ ಶಿವಮೊಗ್ಗಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ನೊಂದವರಿಗೆ ಸಂತ್ವಾನ ಹೇಳುತ್ತಿರುವ ಕ್ರಮವನ್ನು ಶ್ಲಾಘಿಸುತ್ತೇನೆ. ಆದರೆ ಈ ಗಲಭೆಯನ್ನೇ ಮುಖ್ಯವಾಗಿಟ್ಟುಕೊಂಡು ಬರುವ ಚುನಾವಣೆಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಈಗಾಗಲೇ ಇಂತಹ ಬಗೆಯಲ್ಲಿ ಮಾತನಾಡಿದ ಓರ್ವರ ವಿರುದ್ಧ ದೂರು ದಾಖಲಾಗಿದೆ ಎಂದು ಗಮನಿಸಬೇಕು ಎಂದು ಇಂದು ಬೆಳಗ್ಗೆ ಕಾಂಗ್ರೆಸ್ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾವು ಆಯುಧಪೂಜೆಯ ದಿನ ಕತ್ತಿಯನ್ನು, ಆಯುಧಗಳನ್ನು ಪೂಜಿಸುವುದು ಗೊತ್ತು. ರಾಗಿಗುಡ್ಡ ಒಂದು ವಾರ್ಡ್ನ ಒಂದು ಕ್ರಾಸ್ನಲ್ಲಿ ನಡೆದ ಗಲಾಟೆಯನ್ನು ಹಬ್ಬಿಸುವ ಮೂಲಕ ಸಂಬಂಧಗಳನ್ನು ಹಾಳು ಮಾಡುವ ಪ್ರಯತ್ನವನ್ನು ನಿಲ್ಲಿಸಿ. ಕತ್ತಿ ಹೆಸರಿನಲ್ಲಿ ಉದ್ರೇಕಗೊಳಿಸದಿರಿ ಎಂದ ಅವರು ಅಂದಿನ ಗಲಾಟೆಯ ವಿಷಯದಲ್ಲಿ ಸುಮಾರು ೫೦ ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಮೆರವಣಿಗೆ ಮಾಡುತ್ತಿದ್ದರು. ಕಲ್ಲುತೂರಾಟದ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಕಿಡಿಗೇಡಿಗಳ ಮದ್ಯ ನಡೆದ ಗಲಾಟೆಯನ್ನು ಉದ್ರೇಕಿಸಬೇಡಿ. ಶಾಂತಿ ಕಾಪಾಡಲು ಸಾಧ್ಯವಾದರೆ ಸಹಕರಿಸಿ ಇಲ್ಲದಿದ್ದರೆ ನೀವು ಇಲ್ಲಿಗೆ ಬರಲೇಬೇಡಿ ಎಂದು ಹೇಳಿದರು.
ಈ ಗಲಾಟೆ ಎಲ್ಲಾ ಮುಸ್ಲಿಂ ಹಾಗೂ ಹಿಂದೂ ಸಮುದಾಯದವರದ್ದಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ, ಅಲ್ಲಿಯ ಪ್ರಮುಖರನ್ನು ಕರೆಸಿಕೊಂಡು ಶಾಂತಿಸಭೆ ಮಾಡಬೇಕು. ಎಸ್ಪಿ ಅವರಿಗೆ ಕೈ ಕಟ್ಟಿ ಹಾಕಿದ್ದಾರೆನ್ನುವ ಆರೋಪ ವ್ಯಕ್ತಪಡಿಸಿದ ಪ್ರಚೋದಿತ ವ್ಯಕ್ತಿಯ ಬಾಯನ್ನು ಕಟ್ಟಿಹಾಕಿ ನಿಮ್ಮ ಚುನಾವಣೆ ವಿಚಾರದಲ್ಲಿ ರಾಗಿಗುಡ್ಡದ ಬಡಜನತೆಯೇ ಬೇಕಾ.? ನಾವು ಶಿವಮೊಗ್ಗದಲ್ಲಿ ಶಾಂತಿಯುತವಾಗಿ ಇದ್ದೇವೆ. ಯಾವುದೇ ತನಿಖೆ ಬೇಕಾದರೂ ನಂತರ ನಡೆಯಲಿ. ಮೊದಲು ಶಾಂತಿಯ ಸಭೆಯಾಗಲಿ ಎಂದು ಆಯನೂರು ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಐಡಿಯಲ್ಗೋಪಿ, ರಮೇಶ್ ಶಂಕರಘಟ್ಟ, ಧೀರರಾಜ್ ಹೊನ್ನವಿಲೆ, ಶಿ.ಜು.ಪಾಶ, ಹಿರಣಯ್ಯ, ಆಫ್ರಿದಿ, ಕುಮಾರ ಸ್ವಾಮಿ, ವೈ.ಹೆಚ್.ನಾಗರಾಜ್, ಮುಕ್ತಿಯಾರ್ ಅಹಮ್ಮದ್ ಮತ್ತಿರರದ್ದರು.