ಹೊಸಮನೆ ಬಡಾವಣೆಯ ನಾಗರೀಕರ ಅನುಕೂ ಲಕ್ಕಾಗಿ ಪೊಲೀಸ್ ಚೌಕಿ ನಿರ್ಮಿಸಲು ಒತ್ತಾಯಿಸಿ ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದ ಹೊಸಮನೆ ಬಡಾವಣೆ ಹಾಗೂ ಶರಾವತಿ ನಗರದ ನಾಗರೀಕರ ಹಲವು ದಿನಗಳ ಬೇಡಿಕೆಯಾದ ಪೊಲೀಸ್ ಚೌಕಿ ನಿರ್ಮಾಣ ಮಾಡಲು ಅಹವಾಲು ಬಂದಿದ್ದು, ಅದರಂತೆ ಈ ಎರಡು ಬಡಾವಣೆಯಲ್ಲಿ ಸುಮಾರು ೨೬ ಸಾವಿರ ಜನಸಂಖ್ಯೆ ಇದೆ.
ಈ ಭಾಗದಲ್ಲಿ ಮಧ್ಯಮ ವರ್ಗ ದವರು, ಬಡವರು, ಕೂಲಿ ಕಾರ್ಮಿಕರು, ಸಂಘಟಿತ ವಲಯದ ಜನರು ಅತಿ ಹೆಚ್ಚು ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಜನರಿಗೆ ಅನುಕೂಲವಾಗಲು ಈ ಎರಡು ಬಡಾವಣೆಗಳ ಮಧ್ಯಭಾಗದಲ್ಲಿ ಅಂದರೆ ಚಾನಲ್ ಏರಿಯ ಮೇಲ್ಭಾಗದಲ್ಲಿ ಸಾಗರ ರಸ್ತೆಯಿಂದ ೧೦೦ ಅಡಿ ರಸ್ತೆ ರಾಜೇಂದ್ರ ನಗರದ ವರೆಗೆ ಹಾದು ಹೋಗುವ ಸರ್ವಿಸ್ ರಸ್ತೆಯಲ್ಲಿ ನಾಗಪ್ಪ ದೇವಸ್ಥಾನ
ಹಾಗೂ ಮಲೆ ಮಾದೇಶ್ವರ ದೇವಸ್ಥಾನದ ಸಮೀಪ ಸರ್ಕಾರಿ ಜಾಗವಿದ್ದು. ಈ ಜಾಗದಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೆಲವು ಮಾದಕ ವ್ಯಸನಿಗಳು ನಾಗರೀಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ತತಕ್ಷಣ ನಾಗರೀಕರ ರಕ್ಷಣೆಗೆ ಅನುಕೂಲವಾಗಲು ಈ ಭಾಗದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಚೌಕಿ ನಿರ್ಮಾಣ ಮಾಡುವುದು ಅತಿ ಅವಶ್ಯಕವಾಗಿದೆ. ಒಮ್ಮೆ ಬಡಾವಣೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಈ ಭಾಗದ ಜನರ ಹಲವು ದಿನಗಳ ಬೇಡಿಕೆ ಯಾದ ಪೊಲೀಸ್ ಚೌಕಿ ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ.