ಕರ್ನಾಟಕದಲ್ಲಿ ಸೌಲಭ್ಯ ಇದೆ ಆದರೆ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ: ಉದ್ಘಾಟನೆ ಸಮಾರಂಭದಲ್ಲಿ ಡಿ.ಮಂಜುನಾಥ್

ಶಿವಮೊಗ್ಗ ಸೆ.4:

ಕರ್ನಾಟಕದಲ್ಲಿ ಎಲ್ಲಾ ಸೌಲಭ್ಯ ಇದೆ.ಆದರೆ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಿ.ಮಂಜುನಾಥ್ ಹೇಳಿದರು.ಅವರು ಕನ್ನಡ ವೈದ್ಯ ಬರಹಗಾರರ 4ನೇಯ ರಾಜ್ಯ ಸಮ್ಮೇಳನ ದಲ್ಲಿ ಮಾತನಾಡುತ್ತಿದ್ದರು.


ನಾ.ಸು.ಹರ್ಡಿಕರ್ ಅವರು ತಮ್ಮ ಮನೆಯಲ್ಲಿ ಪ್ಲೇಗ್ ರೋಗದಿಂದ ಸಹೋದರರು ಮೃತ ಪಟ್ಟಿದ್ದು ನೋಡಿ ವೈದ್ಯಕೀಯ ಶಿಕ್ಷಣ ಮಾಡುತ್ತಾರೆ.ಆದರೆ ಗಾಂಧೀಜಿಯವರು ಮೊದಲು ದೇಶ ಸ್ವಾತಂತ್ರ್ಯ ಪಡೆಯಲಿ ನಂತರ ಅನೇಕ ಜನ ವೈದ್ಯರು ತಯಾರಾಗುತ್ತಾರೆ ಎಂದು ಹೇಳಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ರನ್ನಾಗಿ ಮಾಡುತ್ತಾರೆ.
ಆದರೆ ಗಾಂಧಿ ಕನಸು ನನಸಾಗಿದೆ.ಇಂದು ವೈದ್ಯರು ಸಾಕಷ್ಟಿದ್ದಾರೆ.ಆದರೆ ಹಂದಿಗೋಡು ಕಾಯಿಲೆ ಮಂಗನ ಕಾಯಿಲೆಗೆ ಇಂದು ಔಷದಿ ಸಿಕ್ಕಿಲ್ಲ.ಅನೇಕ ಆಸ್ಪತ್ರೆಗಳಲ್ಲಿ ಸರಿಯಾದ ಕಾಯಿಲೆ ಯಾವುದೆಂದು ಗುರುತಿಸದೆ ಚಿಕಿತ್ಸೆ ನೀಡಿ ರೋಗಿಗಳ ಪ್ರಾಣಕ್ಕೆ ಕುತ್ತು ತರುವಂತೆ ಆಗಿದೆ.ಎಂದು ಸ್ವ ಅನುಭವ ಹೇಳಿದರು.ಹಾಗಾಗಿ ವೈದ್ಯರು ತಾವು ಕೊಡುವ ಚೀಟಿಯನ್ನು ಕನ್ನಡದಲ್ಲಿ ಅರ್ಥವಾಗುವಂತೆ ಬರೆದರೆ ಒಳ್ಳೆಯದು ಎಂದರು.


ಇಂದು ಕನ್ನಡ ಪತ್ರಿಕೆಗಳನ್ನು ಓದುವವರು ಕಡಿಮೆ ಯಾಗುತ್ತಿದ್ದಾರೆ.ಆದರೆ ವೈದ್ಯರು ಕನ್ನಡದಲ್ಲಿ ಅತ್ಯಂತ ಮೌಲಿಕ ಕೃತಿ ತಂದು ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವಾಧ್ಯಕ್ಷರಾದ ಡಾ.ಕೆ.ಆರ್.ಶ್ರೀಧರ್ ವಹಿಸಿದ್ದರು.ವೇದಿಕೆಯಲ್ಲಿ ಡಾ .ರಕ್ಷಾರಾವ್ ಡಾ ಅರುಣ್ ಡಾ.ಗುರುದತ್ ಡಾ.ವಿನಯ ಶ್ರೀನಿವಾಸ್ ಡಾ.ಶುಭ್ರತಾ ಹಾಗೂ ಡಾ.ಶಿವಾನಂದ ಕುಬಸದ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!