ಶಿವಮೊಗ್ಗ, ಆಗಸ್ಟ್ ೨೨, ಶಾಲಾ ಶಿಕ್ಷಣ ಇಲಾಖೆಯು ೨೦೨೩-೨೪ ನೇ ಸಾಲಿನ ೧೪ ರಿಂದ ೧೭ ವ?ದೊಳಗಿನ ಬಾಲಕ/ಬಾಲಕಿಯರ ಫುಟ್‌ಬಾಲ್ ಮತ್ತು ಹಾಕಿ ಕ್ರೀಡೆಗಳ ಆಯ್ಕೆ ಪ್ರಕ್ರಿಯೆಯನ್ನು ಆ.೨೯ ಮತ್ತು ೩೦ ರಂದು ನಡೆಸಲು ತೀರ್ಮಾನಿಸಲಾಗಿದೆ.


ಫುಟ್‌ಬಾಲ್ ಸ್ಪರ್ಧೆಯನ್ನು ಸೆಕ್ರೇಡ್ ಹಾರ್ಟ್ ಪ್ರೌಢಶಾಲೆಯ ಆವರಣದಲ್ಲಿ ಹಾಗೂ ಹಾಕಿ ಸ್ಪರ್ಧೆಯನ್ನು ನೆಹರು ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಅಂದು ಬೆಳಗ್ಗೆ ೦೯-೩೦ ಗಂಟೆಯೊಳಗಾಗಿ

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರಾಥಮಿಕ/ ಪ್ರೌಢಶಾಲೆಗಳ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಅಗತ್ಯ ದಾಖಲಾತಿಗಳೊಂದಿಗೆ ವರದಿ ಮಾಡಿಕೊಳ್ಳವಂತೆ

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೈ ಶಿ ಶಿ ಮೈಕಲ್ ಕಿರಣ್ ದೂ.ಸಂ : 93808660099 / 9886898633 ಗಳನ್ನು ಸಂಪರ್ಕಿಸುವುದು.

By admin

ನಿಮ್ಮದೊಂದು ಉತ್ತರ

You missed

error: Content is protected !!