ಹೊಸನಗರ : ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ಕಳೆದ 15 ದಿನಗಳಿಂದ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಕ್ಕೆ ವಿಧಿಸಿದ ನಿರ್ಬಂಧವನ್ನು ಭಾನುವಾರ ತೆರವುಗೊಳಿಸಲಾಗಿದೆ.

ಕೇವಲ ವಾಹನಗಳಲ್ಲಿ ಮಾತ್ರ ತೆರಳಲು ಅವಕಾಶ ನೀಡಲಾಗಿದ್ದು, ಚಾರಣ ಮಾಡಲು ಇನ್ನೂ ಅನುಮತಿ ನೀಡಿಲ್ಲ ಎಂದು ವನ್ಯಜೀವಿ ಇಲಾಖೆ ತಿಳಿಸಿದೆ.

ಕೊಡಚಾದ್ರಿಗೆ ತೆರಳುವ ರಸ್ತೆ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಒಳಪಟ್ಟಿದ್ದು, ರಸ್ತೆ ಸಂಚಾರ ಮಾಡಲು ಸಾಧ್ಯವಾಗದಷ್ಟು ದುಸ್ತರವಾಗಿದೆ. ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಇಲಾಖೆಯ ನಿಯಮ ಅಡ್ಡಿಪಡಿಸುತ್ತಿದೆ.

ಇದರಿಂದ ಇಲ್ಲಿ ಸಂಚಾರ ಮಾಡುವವರಿಗೆ ಸುರಕ್ಷತೆ ಇಲ್ಲವಾಗಿದೆ. ಇಲಾಖೆ ಜೊತೆ ಸರ್ಕಾರ ಮಾತುಕತೆ ನಡೆಸಿ ಕೊಡಚಾದ್ರಿ ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!