ಶಿವಮೊಗ್ಗ: ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಧಾನ ಅಂಚೆ ಕಚೇರಿ ಎದುರು ಗ್ರಾಮೀಣ ಅಂಚೆ ಸೇವಕರು ಧರಣಿ ನಡೆಸಿದರು.

ಗ್ರಾಮೀಣ ಅಂಚೆ ನೌಕರರ ಏಳನೇ ವೇತನದ ಆಯೋಗ ವರದಿ ಸಲ್ಲಿಸಿ ಆರು ವರ್ಷಗಳಾದರೂ ಅದನ್ನು ಜಾರಿಗೊಳಿಸುವಲ್ಲಿ ಕೇಂದ್ರಸರ್ಕಾರ ವಿಫಲವಾಗಿದೆ. ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದರೂ ಕೂಡ

ಜಿಡಿಎಸ್ ನೌಕರರು ಇದುವರೆಗೂ ಯಾವುದೇ ಸೌಲತ್ತುಗಳ್ನನು ಪಡೆದುಕೊಂಡಿಲ್ಲ ಈಗಲಾದರೂ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು. 

ಎಲ್ಲಾ ನಿವೃತ್ತ ಜಿಡಿಎಸ್‍ಗೆ ತಾತ್ಕಾಲಿಕ ಪಿಂಚಣಿ ನೀಡಬೇಕು. ಗುಂಪು ವಿಮಾ ವ್ಯಾಪ್ತಿಯ ಮೊತ್ತವನ್ನು 5ಲಕ್ಷಕ್ಕೆ ಹೆಚ್ಚಿಸಬೇಕು. ವೈದ್ಯಕೀಯ ಸೌಲಭ್ಯ ನೀಡಬೇಕು. 5 ಗಂಟೆಗಳ ಕೆಲಸಕ್ಕೆ ನೇಮಕೊಂಡ ಹೊಸ

ನೇಮಕಾತಿಗಳಿಗೆ ಎಲ್ಲಾ ಸೌಲಭ್ಯ ನೀಡಬೇಕು. ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಬೇಕು ಎಂಬುದು ಸೇರಿದಂತೆ  ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!