ಶಿವಮೊಗ್ಗ: ಗುಡ್ಡೇಕಲ್ ಜಾತ್ರೆಯ 2ನೇ ದಿನವಾದ ಇಂದು ಕೂಡ ಅತ್ಯಂತ ಸಂಭ್ರಮ ಸಡಗರ, ವಿಜೃಂಭಣೆಯಿಂದ ನಡೆಯಿತು.
ಆಡಿಕೃತ್ತಿಕೆಯ ಅಂಗವಾಗಿ ಭಕ್ತರು ವಿವಿಧ ಭಾಗಗಳಿಂದ ಕಾವಾಡಿಗಳನ್ನು ಹೊತ್ತು ಗಮನಸೆಳೆದರು. ಅದರಲ್ಲಿಯೂ 35 ಅಡಿ ಉದ್ದದ ತ್ರಿಶೂಲವನ್ನು ಬಾಯಿಗೆ, ಬೆನ್ನಿಗೆ ಏಳೆಂಟು ತ್ರಿಶೂಲಗಳನ್ನು ಚುಚ್ಚಿಕೊಂಡು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು. ನೋಡುಗರಿಗೆ ಇದು ವಿಸ್ಮಯ ಕೂಡ ಆಗಿತ್ತು.
ದೇವಸ್ಥಾನದಲ್ಲಿ ಕೂಡ ಇಂದು ಜನಜಂಗುಳಿ ಇತ್ತು. ವಿಶೇಷ ಪೂಜೆಗಳು ನಡೆದವು. ಈ ಜಾತ್ರೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ವಿಜಯೇಂದ್ರ, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಹಲವು ಗಣ್ಯರು ದೇವರ ದರ್ಶನ ಪಡೆದರು.
ನಿನ್ನೆಗಿಂತಲೂ ಇಂದು ಹೆಚ್ಚಿನ ಜನಜಂಗುಳಿ ಕಂಡುಬಂದಿತು. ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದರು. ರಸ್ತೆ ಸಂಚಾರ ಮಾರ್ಗವನ್ನು ಕೂಡ ಬದಲಾಯಿಸಲಾಗಿತ್ತು.