ಜಿ.ಪಂ. ಕಚೇರಿ ಹತ್ತಿರ ಇದ್ದ ಕೆನರಾ ಬ್ಯಾಂಕ್ ಶಾಖೆಯನ್ನು ಜನನಿಬಿಡ ರಸ್ತೆಯಾಗಿರುವ ದುರ್ಗಿಗುಡಿಯ ಶಾಲೆಯ ರಸ್ತೆಗೆ ಸ್ಥಳಾಂತರಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆನರಾ ಬ್ಯಾಂಕ್ ಈಗಿನ ಮಾರ್ಗದರ್ಶಿ ಬ್ಯಾಂಕ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ವಿಶಾಲವಾದ ಜಾಗವಿದ್ದು, ಸಿಬ್ಬಂದಿ ಮತ್ತು ಗ್ರಾಹಕರ ವಾಹನಗಳ ನಿಲುಗಡೆಗೆ ಜಾಗವೂ ಇದೆ.
ಆದರೆ ಈಗ ಏಕಾಏಕಿ ದುರ್ಗಿಗುಡಿ ಶಾಲೆಯ ರಸ್ತೆಗೆ ಅದನ್ನು ಸ್ಥಳಾಂತರ ಮಾಡಲಾಗಿದೆ. ಆ ಕಟ್ಟಡದ ಮೇಲೆಯೇ ಆಸ್ಪತ್ರೆಯೂ ಇದೆ.
ಅಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ದುರ್ಗಿಗುಡಿ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಬ್ಯಾಂಕ್ ಗೆ ಬರುವ ಗ್ರಾಹಕರು ಮತ್ತು ಸಿಬ್ಬಂದಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಇಲ್ಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹಾಗಾಗಿ ಕೆನರಾ ಬ್ಯಾಂಕ್ ಈಗಿರುವ ಸ್ಥಳದಲ್ಲಿಯೇ ಮುಂದುವರೆಸ ಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.