ಶಿವಮೊಗ್ಗ: ನಲಿಕಲಿ ಕ್ರಿಯಾಶೀಲ ತಾರೆಯರು, ಶಿವಮೊಗ್ಗ ಸಹಕಾರ ಹಾಗೂ ಮಾರುತಿ ಮೆಡಿಕಲ್ಸ್ ಬೆಂಗಳೂರು, ಇವರ ವತಿಯಿಂದ ಹೊಸನಗರದ ಕೆಂಚನಾಲ ಗ್ರಾಪಂನ ಆಯ್ದ ಕ್ಲಸ್ಟರ್ ಹಾಗೂ ಆಯ್ದ ಶಾಲೆಯ ೩೦೦೦ ಮಕ್ಕಳಿಗೆ ಎರಡು ಲಕ್ಷ ಮೌಲ್ಯದ ೧೦,೦೦೦ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಲಿಕಲಿ ತಂಡದ ಮುಖ್ಯಸ್ಥೆ ಫೌಜಿಯ ಸರವತ್ ಮಾರುತಿ ಮೆಡಿಕಲ್ಸ್ ಬೆಂಗಳೂರಿನ ಸಂಸ್ಥಾಪಕರಾದ ಮಹೇಂದ್ರ ಮನೋತ್ ಅವರು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದು, ಪ್ರತಿ ವರ್ಷ ೮ ಲಕ್ಷ ನೋಟ್‌ಬುಕ್ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರಲ್ಲದೆ ನೋಟ್ ಪುಸ್ತಕ ಕಳುಹಿಸಲು ಸಹಕರಿಸಿದ ಆನಂದ್ ಮಣೋತ್ ನಯಾಜ್ ಹಾಗೂ ಉಪೇಂದ್ರ ಇವರನ್ನು ಸ್ಮರಿಸಿದರು
ನಲಿಕಲಿ ಕ್ರಿಯಾಶೀಲ ತಾರೆಯರತಂಡದ ಗೌರವ ಅಧ್ಯಕ್ಷೆ ಲಲಿತ ವೈ.ಎನ್. ಇವರು ನಲಿಕಲಿ ಕ್ರಿಯಾಶೀಲ ತಾರೆಯರು ಶಿವಮೊಗ್ಗ ತಂಡ ನಡೆದು ಬಂದ ದಾರಿ ಹಾಗೂ ತಂಡದ ಉದ್ದೇಶಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಬೇದ್ ಉಲ್ಲಾ ?ರೀಫ್ ವಹಿಸಿದ್ದರು
ಪರಮೇಶ್ವರಪ್ಪ, ಉಪ ನಿರ್ದೇಶಕರು ಆಡಳಿತ ಇವರು ಮಕ್ಕಳಿಗೆ ಒದಗಿಸುವ ಸೌಲಭ್ಯಗಳು ಗುಣಾತ್ಮಕ ಶಿಕ್ಷಣಕ್ಕೆ ನಾಂದಿ ಆಗಲಿವೆ ಎಂದು ಹೇಳಿದರು, ಬಸವರಾಜಪ್ಪ ಬಿ.ಆರ್. ಉಪನಿರ್ದೇಶಕರು ಅಭಿವೃದ್ಧಿ ಇವರು ನಲಿಕಲಿ ಕ್ರಿಯಾಶೀಲ ತಾರೆಯರು ಶಿವಮೊಗ್ಗ ತಂಡದ ಕಾರ್ಯಗಳು ನಿಜಕ್ಕೂ ಶ್ಲಾಘನೀಯ ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಶಾಲೆಯ ಮಕ್ಕಳು ಇನ್ನ? ಫಲಾನುಭವಿಗಳನ್ನು ಪಡೆಯಲಿ ಎಂದು ಆಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃ?ಮೂರ್ತಿ ಮಾತನಾಡಿ, ತಮ್ಮ ಬಾಲ್ಯದಲ್ಲಿ ಬರೆಯಲು ಲೇಖನ ಸಾಮಗ್ರಿಗಳು ಇರಲಿಲ್ಲ. ಇಂದು ಮಕ್ಕಳಿಗೆ ಎಲ್ಲ ಸೌಲಭ್ಯಗಳು ಸುಲಭವಾಗಿ ಸಿಗುತ್ತಿವೆ ಅದನ್ನು ಮಕ್ಕಳು ಸಮರ್ಪಕವಾಗಿ ಬಳಸಿಕೊಂಡು ಕಲಿಕೆಯಲ್ಲಿ ಪ್ರಗತಿಂ ಸಾಧಿಸಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪರಮೇಶ್ವರಪ್ಪ ಉಪನಿರ್ದೇಶಕರು ಆಡಳಿತ ಶಿವಮೊಗ್ಗ ಜಿಲ್ಲೆ ಬಸರಾಜಪ್ಪ ಉಪ ನಿರ್ದೇಶಕರು ಅಭಿವೃದ್ಧಿ ಶಿವಮೊಗ್ಗ, ಎಚ್.ಆರ್. ಕೃ?ಮೂರ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಂಬಾ ಕೆ. ಜಿಲ್ಲಾ ಶಿಕ್ಷಣಾಧಿಕಾರಿಗಳು, ಹರಿಪ್ರಸಾದ್ ಜಿ.ವಿ ಹಿರಿಯ ಉಪನ್ಯಾಸಕರು ರೇಣುಕಾ ಹಿರಿಯ ಉಪನ್ಯಾಸಕರು ವಿನೋದಕುಮಾರಿ ಉಪನ್ಯಾಸಕರು ಡಯಟ್ ಶಿವಮೊಗ್ಗ ರವಿಕುಮಾರ್ ಸಿ.ಕೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೆಂಚನಾಲ, ಲಲಿತಾ ವೈ.ಎನ್. ಗೌರವ ಅಧ್ಯಕ್ಷರು ನಲಿಕಲಿ ಕ್ರಿಯಾಶೀಲ ತಾರೆಯರು ಶಿವಮೊಗ್ಗ ಇವರು ವಹಿಸಿದ್ದರು.
ಕಾರ್ಯದರ್ಶಿ ಭಾಗೀರಥಿ ಹಾಗೂ ತಂಡದ ಎಲ್ಲ ಸದಸ್ಯರು, ರಾಮಚಂದ್ರ ಬಂಡಿ, ವಾಸಪ್ಪ ಗೌಡ, ನಾಗರಾಜ್ ಸಿ.ಆರ್‌ಪಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುಟ್ಟಮ್ಮ ಹಾಗೂ ಸದಸ್ಯರು, ಶಿವಪ್ಪ, ಜಗದೀಶ್, ರಾಧಾ, ಜಿಲ್ಲಾ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ, ಮಂಜುನಾಥ್ ಮಾದಾಪುರ , ಗ್ರಾಮಸ್ಥರು ಪೋ?ಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.