ಶಿವಮೊಗ್ಗ: ರೇಡಿಯೋ ಶಿವಮೊಗ್ಗ90.8 ಎಫ್ಎಂ ಸಮುದಾಯ ಬಾನುಲಿಯಲ್ಲಿ  ಜುಲೈ 17ರ ಸೋಮವಾರದಂದು  ಬೆಳಗ್ಗೆ 10 ಗಂಟೆಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ. ರಾಘವೇಂದ್ರ ಅವರೊಂದಿಗೆ ನೇರ ಸಂವಾದ, ಫೋನ್ ಇನ್  ಕಾರ್ಯಕ್ರಮ ಇರುತ್ತದೆ.

ಬೆಳಗ್ಗೆ 10:30ರಿಂದ  ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಲಿದ್ದು, ಕಾರ್ಯಕ್ರಮದ ಅವಧಿಯಲ್ಲಿ ರೇಡಿಯೋ ಶಿವಮೊಗ್ಗದ ಸ್ಟುಡಿಯೋ ಸಂಖ್ಯೆ (ಮೊ: 96860 96279) ಗೆ ಕರೆ ಮಾಡಬಹುದಾಗಿದೆ. ನಿಮ್ಮ ಅಹವಾಲು, ಸಲಹೆಗಳಿಗೆ ಮುಕ್ತ ಸ್ವಾಗತವಿರುತ್ತದೆ.

ರೇಡಿಯೋ ಶಿವಮೊಗ್ಗ ಮೊಬೈಲ್  ಆಪ್ ನಲ್ಲಿ ಕೂಡಾ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಕೇಳಬಹುದಾಗಿದೆ. ಆಪ್ ನಲ್ಲಿ 24 ಗಂಟೆಯ ಪ್ರಸಾರವಿದೆ.

ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಳುಗರು ಕರೆ ಮಾಡಿ, ಭಾಗವಹಿಸಿಬೇಕೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ. 

By admin

ನಿಮ್ಮದೊಂದು ಉತ್ತರ

error: Content is protected !!