ಶಿವಮೊಗ್ಗ, ಶಿವಮೊಗ್ಗ ನಗರದ ಆಲ್ಕೋಳ ವೃತ್ತದಲ್ಲಿ ಕೋಟ್ಪಾ ಕಾಯ್ದೆಯನ್ವಯ ತಂಬಾಕು ದಾಳಿಯನ್ನು ಹಮ್ಮಿಕೊಳ್ಳಲಾಯಿತು.


ದಾಳಿಯ ಸಂದರ್ಭದಲ್ಲಿ ಒಟ್ಟು 13 ಪ್ರಕರಣಗಳನ್ನು ದಾಖಲಿಸಿ ರೂ. 2500 ದಂಡವನ್ನು ಸಂಗ್ರಹಿಸಲಾಯಿತು. ತಂಬಾಕು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಿಗೆ ಕೋಟ್ಪಾ (ಲಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.


ದಾಳಿಯ ನೇತೃತ್ವವನ್ನು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಓ. ಮಲ್ಲಪ್ಪ ವಹಿಸಿದ್ದರು. ಶಿವಮೊಗ್ಗ ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!