ಶಿವಮೊಗ್ಗ,
ಬಿಜೆಪಿಯವರು ಗ್ಯಾರಂಟಿ ಚಿಂತನೆಗಳನ್ನು ಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಚಿಂತನೆ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.


ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಬೊಬ್ಬೆ

ಹೊಡೆಯುತ್ತಾ ತಪ್ಪು ಸಂದೇಶ ನೀಡುತ್ತಿದ್ದಾರೆ. ಇವರಿಗಿನ್ನೂ ಸೋಲನ್ನು ಅರಗಿಸಿಕೊಳ್ಳುವ, ಒಪ್ಪಿಕೊಳ್ಳುವ ಶಕ್ತಿ ಬಂದೇ ಇಲ್ಲ. ಯಾವುದೇ ಸರ್ಕಾರ ದಿವಾಳಿಯಗುವುದು ಒಂದಿಬ್ಬರ ಮೇಲೆ ಅವಲಂಬಿತವಾದಾಗ ಮಾತ್ರ. ಕಾಂಗ್ರೆಸ್ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ ಒಟ್ಟಾಗಿ ಚಿಂತನೆ ಮಾಡುತ್ತಿದೆ.

ಘೋಷಿಸಿದ ಗ್ಯಾರಂಟಿಗಳನ್ನು ನೀಡೇ ನೀಡುತ್ತೇವೆ. ಆ ಚಿಂತೆ ಬಿಜೆಪಿಯವರಿಗೆ ಬೇಡ ಅವರು ಸದ್ಯಕ್ಕೆ ಮೋದಿ ಚಿಂತನೆ ಮಾಡಲಿ ಎಂದರು.


ನಮಗೆ ಬಹುಮತ ಇಲ್ಲದಿದ್ದರೆ ಇಷ್ಟೊತ್ತಿಗೆ ಅವರು ಬಾಲ ಬಿಚ್ಚುತ್ತಿದ್ದರು. ಈಗ ಅದು ಸಾಧ್ಯವಿಲ್ಲ ವಾಗಿದೆ. ಅಕ್ಕಿ ರಾಜಕೀಯ ಮಾಡುತ್ತಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಬಿಜೆಪಿಯ ಮಾನಸಿಕತೆಯನ್ನು ಅಳವಡಿಸಲಾಗಿತ್ತು. ಪುಟ್ಟ ಮಕ್ಕಳ ಮನಸ್ಸಲ್ಲಿ ಏನೇನೋ ಕಲಿಸಲಾಗುತ್ತಿತ್ತು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಮಾತನಾಡಿದರು.


ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್. ಪ್ರಸನ್ನಕುಮಾರ್, ಅನಿತಾಕುಮಾರಿ, ಜಿ.ಡಿ. ಮಂಜುನಾಥ್, ಹೆಚ್.ಸಿ. ಯೋಗೀಶ್, ಎಸ್.ಕೆ. ಮರಿಯಪ್ಪ, ಶಂಕರಘಟ್ಟ ರಮೇಶ್, ಚಂದ್ರಭೂಪಾಲ್, ಗಿರೀಶ್, ಎಸ್.ಪಿ. ಶೇಷಾದ್ರಿ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!