ಸುಳ್ಳು ಗೆಲ್ಲಲ್ಲ, ಸತ್ಯ ಗೆದ್ದಿದೆ: ಮಧು ಬಂಗಾರಪ್ಪ

ಸೊರಬದಲ್ಲಿದ್ದಶಾಸಕರ ಸುಳ್ಳುಗಳು ಗೆಲ್ಲುವುದಿಲ್ಲ. ಸತ್ಯವೇ ಗೆಲ್ಲುತ್ತದೆ ಎಂಬುದಕ್ಕೆ ಸೊರಬದ ಜನ ನನಗೆ ಇಂದು ನೀಡಿರುವ ಭಾರಿ ಗೆಲುವು ಕಾರಣವಾಗಿದೆ. ಈ ಗೆಲುವನ್ನು ನಾನು ನನ್ನ ಕ್ಷೇತ್ರದ ಜನತೆಗೆ ಸಮರ್ಪಿಸುತ್ತೇನೆ.
ಕಾಂಗ್ರೆಸ್ ಪಕ್ಷದ ಹಿತಚಿಂತನೆಗಳ ಜೊತೆಗೆ ಚುನಾವಣಾ ಪ್ರನಾಳಿಕೆಯ ಉಪಾದ್ಯಕ್ಷನಾಗುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ, ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷನಾಗಿ ಪಕ್ಷದ ಸಕ್ರೀಯ ಚಟುವಟಿಕೆಗಳ ಜೊತೆಗೆ ಕಾರ್ಯಕರ್ತರ ಮನದೊಳಗೆ ಪ್ರವೇಶಿಸಿದ್ದು ನನ್ನ ಪುಣ್ಯ. ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ಚಿಂತನೆ ನನ್ನದಾಗಿದೆ.

ದುರಹಂಕಾರಕ್ಕೆ ಸೋಲಾಗಿದೆ : ಬೇಳೂರು
ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರ ದುರಹಂಕಾರ ವರ್ತನೆಯೆ ಅವರ ಸೋಲಿಗೆ ಕಾರಣವಾಗಿದೆ. ಮತದಾರರು ನನ್ನನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಅವಕಾಶ ನೀಡಿದ್ದಾರೆ. ಕ್ಷೇತ್ರವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡುವ ಜೊತೆಗೆ ಶಿಕ್ಷಣ, ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಶ್ರಮ ನನ್ನ ಗೆಲುವಿನಲ್ಲಿ ಗಮನಾರ್ಹವಾಗಿದೆ. ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಪ್ರಯತ್ನ ನಡೆಸುತ್ತೇನೆ. ಅಧಿಕಾರದ ಆಸೆಗಾಗಿ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದವರಿಗೆ ಮತದಾರ ತಕ್ಕ ಉತ್ತರ ನೀಡಿದ್ದಾನೆ ಎಂದು ವಿಜೇತ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಿಸಿದ್ದಾರೆ.

.

ಅಭಿವೃದ್ಧಿ, ಹಿಂದುತ್ವಕ್ಕೆ ಗೆಲುವು ಕಾರ್ಯಕರ್ತರಿಗೆ ಸಮರ್ಪಣೆ
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಂಘಟಿತ ಪ್ರಯತ್ನದ ಫಲವಾಗಿ ನನಗೆ ಗೆಲುವು ದೊರೆಕಿದೆ. ಅಭಿವೃದ್ಧಿ ಹಾಗೂ ಹಿಂದುತ್ವದ ಗೆಲುವಿಗೆ ಕಾರಣ ನಾನು ಈ ನನ್ನ ಗೆಲುವನ್ನು ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ. ನಿರೀಕ್ಷಿಸಿದ ಅಂತರ ಕಡಿಮೆಯಾಗಿದೆ. ಆದರೆ ಸಂಘಟಿತ ಪ್ರಯತ್ನಕ್ಕೆ ಗೆಲುವಿದೆ ಎಂಬುದನ್ನು ಸಾಬೀತುಪಡಿಸಿದೆ. ಕಾರ್ಯಕರ್ತರ ಹಾಗೂ ಮತದಾರರ ಹಿತಕ್ಕೆ ಬದ್ದವಾಗಿ ಕ್ಷೇತ್ರದ ಅಭಿವೃದ್ದಿಗೆ ಮುಖ್ಯ ಆಧ್ಯತೆ ನೀಡಲಾಗುತ್ತಿದೆ.
ಎಸ್.ಎಸ್.ಚನ್ನಬಸಪ್ಪ, ಶಾಸಕರು.

ನನ್ನ ಗೆಲುವು ಕ್ಷೇತ್ರದ ಜನರ ಗೆಲುವು
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ಕ್ಷೇತ್ರದ ಜನರ ಗೆಲುವು. ಕ್ಷೇತ್ರದ ಜನರೊಂದಿಗೆ ನಾನು ಹಾಗೂ ಪಕ್ಷ ಯಾವುದೇ ವಿಶ್ವಾಸ ದ್ರೋಹ ಬಗೆಯದೇ ಸದಾ ಸಕ್ರೀಯವಾಗಿ ಗುರುತಿಸಿಕೊಂಡದ್ದು ನಮಗೆ ವರವಾಯಿತು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗಿದ್ದ ಅವಧಿಯಿಂದಲೂ ಸಹ ನಂತರ ಸೋತ ದಿನದಿಂದಲೂ ಸೋತರು ಸಹ ಕ್ಷೇತ್ರದ ಜನರ ಜೊತೆಗೆ ನಿಕಟವಾದ ಸಂಪರ್ಕಹೊಂದಿದ್ದೆ. ಕ್ಷೇತ್ರದ ಶಾಸಕರು ಮಾಡದಿರುವ ಕೆಲಸವನ್ನು ಹಾಗೂ ಅವರು ಜನರ ಬಗೆಗೆ ತೋರುತ್ತಿದ್ದ ಅಹಂಕಾರವನ್ನು ಕಂಡು ಬೇಸರವಾಗಿತ್ತು. ಈ ವಿಷಯವನ್ನು ಅರಿತ ಜನರು ನನ್ನ ಬಗ್ಗೆ ವಿಶ್ವಾಸವನ್ನಿಟ್ಟು ಜನರು ಗೆಲುವು ಕೊಡಿಸಿದ್ದಾರೆ. ಶಾರದಾಪೂರ‍್ಯಾನಾಯ್ಕ್, ಶಾಸಕರು, ಶಿವಮೊಗ್ಗ ಗ್ರಾಮಾಂತರ

By admin

ನಿಮ್ಮದೊಂದು ಉತ್ತರ

error: Content is protected !!