ಸಾಗರ : ಹಿಂದೆ ಹಾಲಪ್ಪನವರ ರೇಪ್ ಕೇಸ್‌ನಲ್ಲಿ ಅವರ ಕುಟುಂಬಕ್ಕೆ ಕಣ್ಣೀರು ಹಾಕಿಸಿದ್ದು ನಾನಲ. ಅವರ ಸ್ವಯಂಕೃತ ಅಪರಾಧದಿಂದಾಗಿ ಕಣ್ಣೀರು ಹಾಕಿದ್ದಾರೆ. ಅಂದಿನ ಅವರ ವ್ಯೆಯುಕ್ತಿಕ ಅಪರಾಧಕ್ಕೆ ನಾನು ಕಾರಣ ಅಲ್ಲ ಎನ್ನುವುದನ್ನು ಸಿಗಂದೂರು ದೇವಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಕಾಂಗ್ರೇಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರು ಹೇಳಿದ್ದಾರೆ.
ಇಲ್ಲಿನ ಗಾಂಧಿ ಮಂದಿರದ ಕಾಂಗ್ರೇಸ್ ಕಛೇರಿಯಲ್ಲಿ ಜ್ಯೆನ ಸಮುದಾಯದವರು ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲವನ್ನು ಸೂಚಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ. ಹಾಲಪ್ಪ ಸೋಲಿನ ಭೀತಿಯಿಂದ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಕಾಗೋಡು ತಿಮ್ಮಪ್ಪ ಅವರ ಮನೆಗೆ ಹೋಗಿ ಕಾಗೋಡು ಅವರ ಕಾಲಿಗೆ ಬಿದ್ದು ಬಂದರೆ ಅಡ್ಡಿಯಿಲ್ಲ.
ಆದರೆ ಕಾಗೋಡು ನೀನು ಗೆಲ್ಲುತ್ತೀಯ ಎಂದು ಹೇಳಿದ್ದಾರೆ ಎಂದು ಅಪಪ್ರಚಾರ ಮಾಡಿ ಕಾಗೋಡು ಅವರ ಹಿರಿತನದ ಮೇಲೆ ಅಪಾದನೆ ಮಾಡುತ್ತಿದ್ದಾರೆ. ಇಂತಹ ಸುಳ್ಳು ಪ್ರಚಾರ ಮಾಡಿ ನಾಲಿಗೆಯ ಮೇಲೆ ಹಿಡಿತವಿಲ್ಲದ ಮಾತು ಆಡುತ್ತಿದ್ದಾರೆ. ಹಾಗಾದರೆ ಹಾಲಪ್ಪ ಅವರು ಬಿಜೆಪಿ ಪಕ್ಷದ ಸಂಘಪರಿವಾರದ ಮುಖಂಡರ ಕಾಲಿಗೆ ಏಕೆ ಬೀಳುತ್ತಿಲ್ಲ. ಅವರು ಇವರಿಗೆ ಆಶೀರ್ವಾದ ಮಾಡುವುದಿಲ್ಲವೇ? ಏಕೆಂದರೆ ಹಾಲಪ್ಪನ ನೀಚ ಬುದ್ದಿಯ ಬಗ್ಗೆ ಅವರಿಗೆ ಗೊತ್ತಿದೆ ಎಂದರು.
ಜ್ಯೆನ ಸಮುದಾಯ ಸಮಾಜದಲ್ಲಿ ಸೌಮ್ಯ ಸ್ವಭಾವದವರಾಗಿದ್ದಾರೆ. ಈ ಸಮಾಜ ಬೆಂಬಲಕ್ಕೆ ನಿಂತಿರುವುದು ನನಗೆ ಆನೆಬಲ ಬಂದಿದೆ. ಜ್ಯೆನ ಸಮುದಾಯದ ಜೋತೆ ಇನ್ನಿತರೆ ಅನೇಕ ಸಮುದಾಯದವರು ಬೇಳೂರು ಬೆಂಬಲಕ್ಕೆ ನಿಂತು ಚುನಾವಣೆಯ ಖರ್ಚು ವೆಚ್ಚ ನೀಡುತ್ತಿರುವುದಕ್ಕೆ ನಾನು ಅವರಿಗೆ ಋಣಿಯಾಗಿದ್ದೇನೆ ಎಂದರು.
ವೇದಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ. ಕಾಂಗ್ರೇಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ. ಸವಿತಾ ದೇವರಾಜ್. ಆರ್,ಬಿ.ಡಿ ಗ್ರೂಪ್ ಮಾಲಿಕ ಮಹೇಶ್ ಇನ್ನಿತರರು ಹಾಜರಿದ್ದರು.