ಏ.24 : ಸಂಭ್ರಮರವರಿಂದ ಭಕ್ತಿ ಸಂಗೀತ
ಶಿವಮೊಗ್ಗ,: ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶಂಕರಜಯಂತಿ ಮಹೋತ್ಸವದ ಅಂಗವಾಗಿ ವಿವಿಧಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶ್ರೀ ಶೋಭಕೃತ್‌ನಾಮ ಸಂವತ್ಸರದ ವೈಶಾಖ ಶುದ್ಧ ಪಾಡ್ಯದಿಂದ ಪಂಚಮಿಯ ವರೆಗೆ (ಏ.೨೧ರಿಂದ ೨೫ರವರೆಗೆ) ಪ್ರತಿದಿನ ಪ್ರಾತಃ ೭-೦೦ ರಿಂದ ಶ್ರೀ ಶಂಕರಾಚಾರ್ಯ ಸನ್ನಿಧಿಯಲ್ಲಿರುದ್ರಾಭಿಷೇಕ, ಪ್ರಾತಃ ೧೧-೦೦ ರಿಂದ ೧೨-೦೦ ರವರೆಗೆ ಶ್ರೀ ಶಂಕರ ವಿಜಯ ಪಾರಾಯಣ ಸಂಜೆ ೫.೦೦ ರಿಂದ ೬.೩೦ ವರೆಗೆ ಶ್ರೀ ಶಂಕರ ಸ್ತೋತ್ರಮಾಲಾ, ರಾಜಲಕ್ಷ್ಮೀರವರ ನೇತೃ ತ್ವದಲ್ಲಿ ಸೌಂದರ್ಯ ಲಹರಿ ಸತ್ಸಂಗ ನಡೆಯಲಿದೆ.
ಏ.೨೨ರ ಇಂದು ಸಂಜೆ ೦೬.೩೦ಕ್ಕೆ ಸಮ್ಮಿತ್ ನಟೇಶ್‌ರವರಿಂದಕರ್ನಾಟಕ ಶಾಸೀಯ ಸಂಗೀತ, ಏ. ೨೩ರಂದು ಶ್ರೀ ಶಂಕರ ವಿಜಯ ಗಮಕ ವಾಚನ ಪ್ರೊ.ಸನತ್‌ಕುಮಾರ್ ಮತ್ತೂರು, ವ್ಯಾಖ್ಯಾನಅಚ್ಯುತ ಅವಧಾನಿಗಳು ಮತ್ತೂರು, ಏ. ೨೪ರಂದು ಸಂಭ್ರಮ ಹೆಚ್.ಎಸ್ ಮತ್ತು ವೃಂದದವರಿಂದ ಭಕ್ತಿ ಸಂಗೀತ, ಏ. ೨೫ರಂದು ಶ್ರೀ ಶೃಂಗೇರಿ ಶಂಕರ ಮಠದವರಿಂ ಶ್ರೀ ಶಂಕರದರ್ಶನಗೀತರೂಪಕ ಪ್ರರ್ದಶನವಿದೆ.
ಪ್ರತೀ ದಿನ ಕಾರ್ಯಕ್ರಮಗಳ ನಂತರ ಪ್ರಾಕಾರೋತ್ಸವ ನಡೆಯಲಿದೆ.
ಶ್ರೀ ಶಂಕರಜಯಂತಿ ಸೇವಾ ಕಾರ್ಯಗಳು ಹಾಗೂ ಹೆಚಿನ ವಿವರಗಳಿಗೆ ಸಂಪರ್ಕಿಸಿ: ೭೮೯೨೧೩ ೭೪೩೧ / ೯೪೪೮೯೪೩೯೩೭ರಲ್ಲಿ ಸಂಪರ್ಕಿಸಬಹುದು.

ಏ.24: ಉಚಿತ ಚಿಕಿತ್ಸಾ ಶಿಬಿರ
ಶಿವಮೊಗ್ಗ : ತೆಗ್ಗಿನಮಠದ ಷ||ಬ್ರ|| ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ೩೦ನೇ ಜನ್ಮ ದಿನೋತ್ಸವದ ಅಂಗವಾಗಿ ಏ.೨೪ರ ಸೋಮವಾರ ಬೆಳಗ್ಗೆ ೧೦ರಿಂದ ಸಂಜೆ ೫ ಗಂಟೆಯವರೆಗೆ ತಾಲೂಕಿನ ನಿದಿಗೆಯ ಟಿ.ಎಂ.ಎ.ಇ.ಎಸ್. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಹಾಗೂ ಗೋಪಾಳದ ಪ್ರೆಸ್ ಕಾಲೋನಿಯ ಶ್ರೀ ಚಂದ್ರಮೌಳೀಶ್ವರ ಪಂಚಕರ್ಮ ಮತ್ತು ಕ್ಷಾರಸೂತ್ರ ಚಿಕಿತ್ಸಾ ಕೇಂದ್ರದಲ್ಲಿ ತಜ್ಞ ವೈದ್ಯರಿಂದ ಉಚಿತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
ಮಾಹಿತಿಗಾಗಿ ಮೊ: ೭೨೫೯೬೮೫೧೩೫, ಫೋನ್: ೦೮೧೮೨-೨೪೬೩ ೬೦ಗೆ ಸಂಪರ್ಕಿಸಬಹುದು ಎಂದು ಟಿ.ಎಂ.ಎ.ಇಎಸ್. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ.ಹಿರೇಮಠ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಏ. 23: ಶ್ರೀ ಆದಿರಂಗನಾಥ ಸ್ವಾಮಿ ರಥೋತ್ಸವ ಮತ್ತು ಅನ್ನಸಂತರ್ಪಣೆ
ಶಿವಮೊಗ್ಗ, ನಗರದ ಗೋಪಾಳ ಬಡಾವಣೆ ಪುರಾತನ ಶ್ರೀ ಆದಿ ರಂಗನಾಥ ಸ್ವಾಮಿರಥೋತ್ಸವ ಹಾಗೂ ಅನ್ನ ಸಂತರ್ಪಣೆಕಾರ್ಯಕ್ರಮ ಏ. ೨೩ರ ಭಾನುವಾರ ಬೆಳಿಗ್ಗೆ ೧೦.೩೦ರಿಂದ ಆರಂಭವಾಗಲಿದ್ದು, ೧೨.೦೦ ಗಂಟೆಗೆ ಭಕ್ತಾದಿಗಳಿಗಾಗಿ ಅನ್ನ ಸಂತರ್ಪಣೆ ನಡೆಯಲಿದೆ.
ಏ. ೨೪ರ ಸೋಮವಾರ ಓಕುಳಿ ಹಾಗೂ ಪಲ್ಲಕ್ಕಿಉತ್ಸವ ನಡೆಯಲಿದೆ.
ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದ ಮೊಟ್ಟ ಮೊದಲ ಶ್ರೀ ಆದಿರಂಗನಾಥ ಸ್ವಾಮಿದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ದೇವಾಲಯದ ಹೊಯ್ಸಳ ಕಾಲದ್ದು. ಈ ದೇವಾಲಯಕ್ಕೆ ಸುಮಾರು ೧೦೦೦ ವರ್ಷದಇತಿಹಾಸವಿದೆ. ಶ್ರೀ ಆದಿರಂಗನಾಥ ಸ್ವಾಮಿ ವಿಗ್ರಹದ ಮುಂದೆಉದ್ಧವಅಂಗವಿದ್ದು, ಈ ಉದ್ದವ ಲಿಂಗಕ್ಕೆ ಮಾಡಿದಅಭಿಷೇಕದ ಜಲ ಲಿಂಗದಲ್ಲಿಯೇಐಕ್ಯವಾಗುವುದು ವಿಶೇಷ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

ಫೆ.23ರಂದು ಇಸ್ಕಾನ್ ಬೇಸಿಗೆ ಶಿಬಿರ ಸಮಾರೋಪ
ಶಿವಮೊಗ್ಗ: ಇಸ್ಕಾನ್ ಸಂಸ್ಥೆಯವತಿಯಿಂದ ಶಿವಮೊಗ್ಗದಲ್ಲಿ ಎರಡು ವಾರಗಳ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಇದರ ಸಮಾರೋಪ ಸಮಾರಂಭವನ್ನು ಏ.೨೩ರಂದು ಸಂಜೆ ೫ರಿಂದ ೮.೩೦ ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಬೇಸಿಗೆ ಶಿಬಿರದಿಂದ ಆಗುವ ಲಾಭಗಳ ಬಗ್ಗೆ ವಿವರಣೆ,ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ ಕೊನೆಯಲ್ಲಿ ಎಲ್ಲರಿಗೂ ತೀರ್ಥಪ್ರಸಾದ ವಿತರಣೆ ಇರುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!