ಶಿವಮೊಗ್ಗ,:
ವಿಧಾನಸಭೆ ಚುನಾವಣೆಗೆ ನಗರದ ಮಾಜಿ ಶಾಸಕರಾದ ಕೆ. ಬಿ.ಪ್ರಸನ್ನಕುಮಾರ್ ಆವರಿಗೆ ಕಾಂಗ್ರೆಸ್ ಪಕ್ಷ ನಗರ ಕ್ಷೇತ್ರಕ್ಕೆ ಟಿಕೆಟ್ ನೀಡದೇ ಇರುವುದಕ್ಕೆ ಪ್ರಸನ್ನಕುಮಾರ್ ಅವರ ಅಭಿ ಮಾನಿಗಳು ಮತ್ತು ಕಾರ್ಯಕರ್ತರು ಘೋಷಣೆ ಕೂಗಿ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೈಕಮಾಂಡ್ ನಡೆಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು ಎಲ್ಲ ಜಾತಿ ಧರ್ಮ ದವರನ್ನು ಸಮಾನವಾಗಿ ಕಾಣುತ್ತಾ ಎಲ್ಲರ ಪರ ಧ್ವನಿಯಾಗಿ ಪ್ರಸನ್ನ ಕುಮಾರ್ ಅವರು ಇದ್ದರು ಕರೋನಾ ಸಂದರ್ಭದಲ್ಲಿ ಸಹ ಇಡೀ ನಗರದಲ್ಲಿ ಬಹಳಷ್ಟು ಕೆಲಸ ವನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ನಗರದಲ್ಲಿ ಬಲಿಷ್ಠವಾಗಲು ಇವರೇ ಪ್ರಮುಖ ಕಾರಣ ಹಿಂದಿನ ಚುನಾವಣೆಗಳಲ್ಲಿ ಈಶ್ವರಪ್ಪ ಹಾಗೂ ರುದ್ರೇಗೌಡರಂತಹ ಬಲಾಢ್ಯರನ್ನು ಸೋಲಿಸಿ ನಗರ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿ ದ್ದರು ಈಗ ಅವರಿಗೆ ಟಿಕೆಟ್ ನೀಡದೇ ಅನ್ಯಾಯ ಮಾಡಿದ್ದಾರೆ ಎಂದರು.
ಮಧ್ಯ ಕರ್ನಾಟಕ ಭಾಗದಲ್ಲಿ ಬ್ರಾಹ್ಮಣ ಸಮಾಜಕ್ಕೆ ಎಲ್ಲೂ ಟಿಕೆಟ್ ನೀಡಿಲ್ಲ ನೀಡುತ್ತಿದ್ದ ಕ್ಷೇತ್ರದಲ್ಲೂ ಸಹ ಟಿಕೆಟ್ ಅನ್ನು ತಪ್ಪಿಸಿ ಬ್ರಾಹ್ಮಣ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಇದನ್ನು ಸರಿಪಡಿಸಿ ಬೇಕೆಂದು ಆಗ್ರಹಿಸಿದರು.
ಸೋತರೂ ಹಿಂದೆಂದೂ ಬರದ ಮತಗಳು ಪಕ್ಷಕ್ಕೆ ಬಂದಿದ್ದು, ಪಕ್ಷ ಈ ಸಲ ನನಗೆ ಅಭ್ಯರ್ಥಿ ಯಾಗಲು ಅವಕಾಶ ನೀಡುತ್ತದೆ ಎಂಬ ನಂಬಿಕೆ ಇತ್ತು, ಆದರೆ, ಯಾವ ಕಾರಣಕ್ಕೆ ಮೋಸ ಆಗಿದೆ ಎಂದು ಗೊತ್ತಿಲ್ಲ, ಪ್ರತಿ ಬಡಾವಣೆಗೆ ಹೋಗಿ ಗುರು ಹಿರಿಯರ ಆಶೀ ರ್ವಾದ ಪಡೆದು ಕಾರ್ಯಕರ್ತರನ್ನು ಮಾತನಾಡಿ ಪಕ್ಷದ ನಾಯಕರಿಗೆ ಕಾರ್ಯಕರ್ತರ ಅಭಿಪ್ರಾಯ ತಿಳಿಸಿ, ಮುಂದಿನ ತೀರ್ಮಾನ ಕೈಗೊಳ್ಳುವೆ ಎಂದರು.