ಸಾಮಾಜಿಕ ಜಾಲತಾಣದ ಚಿತ್ರ

ವಿಶೇಷ ವರದಿ
ಶಿವಮೊಗ್ಗ,ಮಾ.17
ಆರೋಗ್ಯ, ರಕ್ಷಣಾ, ಕಾರ್ಮಿಕ ಇಲಾಖೆ ಸೇರಿದಂತೆ ಹಲವು ಇಲಾಖೆ ಗಳ ಅನುಮತಿಯ ಮೇರೆಗೆ ಆರಂಭ ಗೊಳ್ಳ ಬೇಕಿರುವ ಸ್ಪಾ ಗಳು ಅಂದರೆ ಮಸಾಜ್ ಮಾಡುವ ಕೇಂದ್ರಗಳು ಶಿವಮೊಗ್ಗದಲ್ಲಿ ವ್ಯಾಪಕವಾಗಿ ಹೆಚ್ಚಿದ್ದು, ಇಲ್ಲಿನ ಕೆಲವು ಸ್ಪಾ ಗಳಲ್ಲಿ ಅಕ್ರಮವಾಗಿ ಮಸಾಜ್ ನೆಪದಲ್ಲಿ ಸೆಕ್ಸ್ ದಂಧೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ಮನಸಿಗೆ ಮುದ ನೀಡುವ, ಏಕಾಂತ ತೆಯನ್ನು ಅನುಭವಿಸುವಂತೆ ಮಾಡುವ, ದೈಹಿಕ ಆರೋಗ್ಯವನ್ನು ಸುಧಾರಿಸುವ, ದೇಹದ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ಆರೋಗ್ಯಕರ ವಿಷಯಗಳ ಅಂಶದಿಂದ ಆರಂಭಗೊಂಡಿರುವ ಸ್ಪಾ ಗಳು ಶಿವ ಮೊಗ್ಗ ನಗರದಲ್ಲೇ ೯೦ಕ್ಕಿಂತ ಹೆಚ್ಚಾ ಗಿದ್ದು, ಅವುಗಳ ಆರಂಭಕ್ಕೆ ಅನುಮತಿ ಪಡೆಯಬೇಕಾದ ಯಾವುದೇ ಬಗೆಯ ನಿಯಮಗಳು ಬಹಳಷ್ಟು ಕಡೆ ಪಾಲನೆ ಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಸ್ಪಾ ಗಳು ಸರ್ಕಾರದ ಹಲವು ಇಲಾಖೆಗಳಿಂದ ಅನುಮತಿಯನ್ನು ಪಡೆಯುವ ಜೊತೆಗೆ ವಿಶೇಷವಾಗಿ ಆರೋಗ್ಯ ಇಲಾಖೆಯಿಂದ ನೊಂದಣಿ ಪಡೆದಿರಬೇಕು, ಅದರ ಜೊತೆಗೆ ಅಲ್ಲಿ ತರಬೇತಿ ನೀಡುವಂತಹ ವ್ಯಕ್ತಿಗಳು ಅಧಿಕೃತವಾದ ತರಬೇತಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಇಂತಹ ಪ್ರಮಾಣ ಪತ್ರ ಪಡೆದವರ ಸಂಖ್ಯೆ ಬಹಳಷ್ಟು ಸ್ಪಾ ಗಳಲ್ಲಿ ಇಲ್ಲ ಎಂಬುದು ಮತ್ತೊಂದು ದೊಡ್ಡ ಆರೋಪ.


ಶಿವಮೊಗ್ಗದ ಈ ಸ್ಪಾ ಗಳ ಬಗ್ಗೆ ಹೇಳುವ ಮೊದಲು ೩೦ ರಿಂದ ೪೫ ನಿಮಿಷದೊಳಗೆ ಮುಗಿಯುವ ಮಸಾಜ್ ಕಾರ್ಯವು ನಿರಂತರವಾಗಿ ನಡೆಯುತ್ತಿದೆ ಎನ್ನಲಾಗಿದ್ದು, ಅದರಲ್ಲಿನ ಮಸಾಜ್‌ಗಳು ವಿಭಾಗಗಳು ತುಂಬಾ ಚಿತ್ರ ವಿಚಿತ್ರವೆನಿ ಸುವಂತೆ ಕಾಣಿಸಿಕೊಳ್ಳುತ್ತಿವೆ ಎಂದು ಆರೋಪಿಸಲಾಗಿದೆ.
ಪೋಲಿಸ್ ಇಲಾಖೆ ಶಿವಮೊಗ್ಗದ ಎಲ್ಲಾ ಸ್ಪಾ ಗಳ ಮಾಲೀಕರನ್ನು ಒಂದೆಡೆ ಸೇರಿಸಿ ಅವರೊಂದಿಗೆ ಸಭೆ ನಡೆಸಿದಾಗ ಬಹಳಷ್ಟು ಸ್ಪಾ ಗಳ ಅನುಮತಿ ಪೂರಕ ದಾಖಲೆಗಳು, ತರಬೇತಿ ಪಡೆದ ತರಬೇ ತುದಾರರ ಪ್ರಮಾಣ ಪತ್ರಗಳು ಕಾಣಿಸಿ ಕೊಳ್ಳಲಿಲ್ಲ ಎನ್ನಲಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಕಟ್ಟು ನಿಟ್ಟಿನ ಎಚ್ಚರಿಕೆ ಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗದ ಈ ಕೆಲಸಗಳ ಬಗ್ಗೆ ವಿಶೇಷವಾಗಿ ಹೇಳಲೇಬೇಕು ಏಕೆಂದರೆ ಇಲ್ಲಿ ಮಸಾಜ್ ಹೆಸರಿನ ಜೊತೆಗೆ ಸೆಕ್ಸ್ ದಂಧೆಯೂ ನಡೆಯು ತ್ತಿದೆ ಎಂದು ಹೇಳಲಾಗುತ್ತಿದ್ದು, ಇದರ ಬಗ್ಗೆ ಹಲ ವರು ಪತ್ರಿಕೆಗೆ ತಿಳಿಸಿದ ಮಾಹಿತಿ ಯಾಗಿರುತ್ತದೆ.


ಅಂತೆಯೇ ಇಲ್ಲಿ ಸೆಕ್ಸ್ ದಂಧೆ ನಡೆಸಲು ಅನುಮತಿ ಇದೆಯೇ ಎಂದು ಪ್ರಶ್ನಿಸುವ ಅನಿವಾರ್ಯತೆ ಬಂದಿದೆ. ದೇಹದ ಆರೋಗ್ಯವನ್ನು ಸುಧಾರಿಸಿಕೊ ಳ್ಳುವ, ಮಾನಸಿಕ ಸ್ಥಿಮಿತತೆಯನ್ನು ಉತ್ತಮ ಗೊಳಿಸುವ ಸ್ಪಾ ಗಳು ಇದರ ಮೂಲಕ ಹೊಸದಂದೆ ಆರಂಭಿಸಿ ಮತ್ತೊಂ ದು ಬಗೆಯ ಹೊಸ ತಿರುವಿನತ್ತ ಹೆಜ್ಜೆ ಹಾಕಿ ದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಅನುಮತಿ ರಹಿತ ಹಾಗೂ ಸೂಕ್ತ ಪರವಾನಿಗೆ ಪಡೆಯದ ಮತ್ತು ಪ್ರಮಾಣ ಪತ್ರ ಇಲ್ಲದ ಸ್ಪಾ ಗಳಿಂದ ಇನ್ನು ಯಾವ ಬಗೆಯ ವ್ಯವಹಾರ ನಡೆಯಬಹುದು ಎಂದು ಹೇಳಬಹುದು. ತರಬೇತಿಯೇ ಇಲ್ಲದ ತರಬೇತುದಾರರಿಂದ ಯಾವ ಚಿಕಿತ್ಸೆ ದೊರೆಯಬಹುದು ಎಂಬ ಅನುಮಾನದ ಪ್ರಶ್ನೆ ಮೂಡುತ್ತಿದೆ.


ಕನಿಷ್ಠ ಮಸಾಜಿನ ದಿನದ ವ್ಯವಹಾ ರದ ಲೆಕ್ಕಾಚಾರವನ್ನು ಪ್ರತಿಯೊಬ್ಬರಿಗೂ ಮಾಡಲಾಗುತ್ತಿದೆ ಎನ್ನಲಾಗಿದ್ದು, ಈ ದಂದೆಯ ಯಾವುದೇ ಲೆಕ್ಕಗಳ ಬಹ ಳಷ್ಟು ಭಾಗ ಯಾವುದೇ ದಾಖಲೆಯಲ್ಲಿ ನೋಂದಣಿ ಆಗಿರುವುದಿಲ್ಲವಂತೆ. ಮಾಮೂಲಿ ಮಸಾಜ್‌ಗೆ ಎಂಬಂತೆ ನೊಂದಣಿ ಬಿಲ್ ನೀಡುವ ಸಂಸ್ಥೆಗಳು ಸೆಕ್ಷಿಯಲ್ ಆಟಕ್ಕೆ ಯಾವುದೇ ಬಿಲ್ ನೀಡುವುದಿಲ್ಲವಂತೆ.
ಶಿವಮೊಗ್ಗದ ಹಾದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ಇಂತಹ ಸ್ಪಾ ಗಳು ಆರಂಭಗೊ ಳ್ಳುತ್ತಿದ್ದು ಅವುಗಳ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಒತ್ತಾಯಿಸಲಾ ಗಿದೆ ಇಲ್ಲದಿದ್ದರೆ ಸ್ಪಾ ಹೆಸರಿನ ಸೆಕ್ಸ್ ದಂಧೆ ಒಂದು ಉದ್ಯಮವಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳಿವೆಯಲ್ಲವೇ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕೂಡಲೇ ಇತ್ತ ಗಮನಹರಿಸಲು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!