ಶಿವಮೊಗ್ಗ,ಮಾ.14:
ಮುಸ್ಲಿಂ ಸಮುದಾಯದಂತೆ ಹಿಂದೂಗಳಲ್ಲಿಯೂ ಕೆಲ ತಲೆಹರಟೆಗಳಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.


ನಿನ್ನೆ ಈಶ್ವರಪ್ಪ ಮಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅಝಾನ್ ವಿರುದ್ಧ ವಿವಾದಾತ್ಮಕವಾಗಿ ಹೇಳಿಕೆ ಕೊಟ್ಟಿದ್ದರು. ಇಂದು ಮುಸ್ಲಿಮರ ಸಭೆಯಲ್ಲಿ ಈಶ್ವರಪ್ಪ ಹಿಂದುತ್ವವಾದಿಗಳ ಬಗ್ಗೆ ಕಣ್ಣು ಕೆಂಪಾಗಿಸುವ ರೀತಿ ಹೇಳಿಕೆ ಕೊಡುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.
ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ. ನನಗೆ ನೂರಕ್ಕೆ ನೂರು ಗೊತ್ತು. ಹಿಂದೂಗಳಲ್ಲಿಯೂ ಕೆಲ ತಲೆಹರಟೆಗಳಿದ್ದಾರೆ.ನಾನು ಇಲ್ಲ ಅನ್ನಲ್ಲ, ಮುಸ್ಲಿಮರಲ್ಲಿಯೂ ಕೆಲವರು ತಲೆಹರಟೆಗಳಿದ್ದಾರೆ. ಅವರೊಂದು ನಾಲ್ಕು ಜನ, ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿರುವ ವಿಡಿಯೋ ವೈರಲ್ ಆಗಿದೆ.


ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬವರ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಹಂಚಿಕೆ ಮಾಡಲಾಗಿದೆ. ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ, ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದು ಈಶ್ವರಪ್ಪ ಹೇಳಿದ ಹೇಳಿಕೆಯಾದರೂ ಸಾಕಷ್ಟು ಚರ್ಚೆಯಾಗಿದ್ದು ವಿಶೇಷವೇನಲ್ಲ. ಇಲ್ಲಿಯವರೆಗೆ ಮುಸ್ಲಿಂನ ಕೆಲ ಗೂಂಡಾಗಳು, ರೌಡಿಗಳು ಎಂದು ಹೇಳುತ್ತಲೇ ಬಂದಿದ್ದ ಈಶ್ವರಪ್ಪ ಅವರು ಹಿಂದೂ ಸಮಾಜದ ಬಗ್ಗೆ ಮಾತನಾಡಿದ್ದು ನಾನು ವಿಚಾರಗಳ ಚರ್ಚೆಗೆ ಕಾರಣವಾಗಿರುವುದಂತೂ ಸತ್ಯ.
ಅಂತೆಯೇ ಈಶ್ವರಪ್ಪ ಅವರು ಸಾಂದರ್ಭಿಕವಾಗಿ ಹಾಗೂ ಅರ್ಥಗರ್ಭಿತವಾಗಿ ಈ ವಿಷಯವನ್ನು ಹೇಳಿರಬಹುದು. ಇದಕ್ಕೆ ಚುನಾವಣೆಯ ಲೇಪ ಹಚ್ಚುವ ಕೆಲಸವೂ ನಡೆಯುತ್ತಿದೆ. ತಲೆ ಹರಟೆ ಎಂಬ ಪದ ಇಲ್ಲಿ ಎಲ್ಲಾ ಸಮಾಜಗಳಲ್ಲಿ ಇದೆ ಎಂಬುದನ್ನು ಸ್ಪಷ್ಟಪಡಿಸಿದೆ. ಹೊಸ ಚರ್ಚೆಗೆ ಹೊಸ ವಾಕ್ಯವನ್ನು ಈಶ್ವರಪ್ಪ ನೀಡಿದ್ದಾರೆ. ಮುಂದಿನ ಚರ್ಚಾ ವಿಷಯ ಗಮನಿಸುವುದಷ್ಟೆ ಮಾದ್ಯಮದ ಕೆಲಸ.

By admin

ನಿಮ್ಮದೊಂದು ಉತ್ತರ

error: Content is protected !!