ಶಿವಮೊಗ್ಗ,
ಸಮಯಕ್ಕೆ ತಕ್ಕಂತೆ ನಿರ್ಧಾರ, ಸಮಯಕ್ಕೆ ಆದ್ಯತೆ, ಜೊತೆಗೆ ಮನೆಗೆ ಆದ್ಯತೆ ನೀಡುವ ಮಹಿಳೆಯರು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಮಾಜಿ ಜಿ.ಪಂ. ಸದಸ್ಯರು ಮತ್ತು ಈ ಸಂಸ್ಥೆಯ ಅಧ್ಯಕ್ಷರು ಆದ ಕೆ.ಇ.ಕಾಂತೇಶ್ ಹೇಳಿದರು.
ಅವರು ಸ್ಟೈಲ್ ಡಾನ್ಸ್ ಗ್ರೂಪ್ ಶಿವಮೊಗ್ಗ ನೃತ್ಯ ಸಂಸ್ಥೆಯ ವತಿಯಿಂದ “ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ” ನೃತ್ಯ ತರಗತಿಯ ವಿದ್ಯಾರ್ಥಿಗಳ ಮಹಿಳಾ ಪೋಷಕರೊಂದಿಗೆ ಸೇರಿ “ಸ್ಟೈಲ್ ಕುಟುಂಬ ಅವಾರ್ಡ್ ೨೦೨೩” ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯಿಯಿಂದಲೇ ಸೃಷ್ಟಿಯಾಗಿರುವ ನಾವುಗಳು, ಮನುಷ್ಯ ಜನ್ಮವನ್ನು ಪಡೆದುಕೊಂಡು ಬಂದಿದ್ದು, ಹೆಣ್ಣಾಗಲೀ,
ಗಂಡಾಗಲೀ ಹೆಣ್ಣಿನ ಸಾಧನೆಯನ್ನು ಸದಾ ಗೌರವಿಸಬೇಕು. ಕೇವಲ ಹೆಣ್ಣನ್ನು ಪೂಜಿಸು ವುದಷ್ಟೇ ಅಲ್ಲದೇ, ಆಕೆಯನ್ನು ಗೌರವ ದಿಂದ ಕಂಡಾಗ ಮಾತ್ರ ಈ ದಿನಾಚರಣೆಗೆ ಅರ್ಥ ಬರುವಂತಾಗುತ್ತದೆ. ಹೆಣ್ಣು ಸಮಾ ಜದ ಕಣ್ಣಾಗಿದ್ದು, ಸಮಾಜದಲ್ಲಿ ಹೆಣ್ಣನ್ನು ಉನ್ನತ ಸ್ಥಾನದಲ್ಲಿ ಕಾಣುತ್ತಿದ್ದೇವೆ ಎಂದರು.
ಸ್ಟೈಲ್ ಡ್ಯಾನ್ಸ್ ನೃತ್ಯ ಸಂಸ್ಥೆಯಲ್ಲಿರುವ ಮಹಿಳಾ ಪೋಷಕರು, ಯುವತಿಯರಿಗೆ ನಮ್ಮ ಸಾಧಕರು ಎಂಬ ಪ್ರಶಸ್ತಿ ಕೊಟ್ಟು ಸಂಸ್ಥೆ ಗುರುತಿಸುತ್ತಿರುವುದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಷಯ ಎಂದು ಹೇಳಿದರು.
“ಯುವ ಸಾಧಕ ಅವಾರ್ಡ್ ಮತ್ತು “ನಮ್ಮ ಸಾಧಕರು” ಎಂಬ ಅವಾರ್ಡ್ ಅನ್ನು ಸಂಸ್ಥೆಯ ಅಧ್ಯಕ್ಷ ಕೆ ಈ ಕಾಂತೇಶ್ ಅವರು ನೀಡಿ ಗೌರವಿಸಿದರು.
ಮಹಿಳೆಯರ ಆತ್ಮರಕ್ಷಣೆಗಾಗಿ ” ಸೆಲ್ಫ್ ಡಿಫೆನ್ಸ್” ತರಗತಿಯನ್ನು ಅಂತರಾಷ್ಟೀಯ ಕರಾಟೆ ಪಟು “ಮೀನಾ” ಅವರು ನಡೆಸಿ ಮಹಿಳಾ ಆತ್ಮರಕ್ಷಣೆಯ ಕೆಲವು ಕೌಶಲ್ಯತೆ ಮತ್ತು ಭಂಗಿಯನ್ನು ಕಲಿಸಿಕೊಟ್ಟರು.
ಈ ಮೂಲಕ ಪ್ರಶಸ್ತಿ ಪಡೆದ ಫಿಟ್ನೆಸ್ ಮಹಿಳಾ ವಿದ್ಯಾರ್ಥಿಯರಿಗೆ , ಡಾನ್ಸ್ ಮಹಿಳಾ ವಿದ್ಯಾರ್ಥಿಯರಿಗೆ ಮತ್ತು ಭಾಗವಹಿಸಿದ ಪ್ರತಿಯೊಬ್ಬ ಮಹಿಳಾ ಪೋಷಕರಿಗೂ ಸಂಸ್ಥೆಯ ಅಧ್ಯಕ್ಷರಾದ ಕೆ ಈ ಕಾಂತೇಶ್ ಮತ್ತು ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಎನ್ ಅವರು ವೇದಿಕೆಯಲ್ಲೆ ಶುಭಹಾರೈಸಿದರು.
ಈ ಕಾರ್ಯಕ್ರಮದ ಆಯೋಜನೆಯನ್ನ ಸಂಸ್ಥೆಯ ನೃತ್ಯ ನಿರ್ದೇಶಕರುಗಳಾದ ವಿನಯ್ , ಜೀತೇಂದ್ರ, ದರ್ಶನ್ ನಡೆಸಿದರೆ, ಅಕ್ಷಯ್ ಕುಮಾರ್ , ಉಪಸ್ಥಿತಿ ಇದ್ದರು.