ಶಿವಮೊಗ್ಗ,ಜ.17: ಸಮೀಪದ ಮೇಲಿನ ಹನಸವಾಡಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ನಿನ್ನೆ ಮಧ್ಯಾಹ್ನದ ನಂತರ ಒಬ್ಬರ ಬಳಿಕ ಇನ್ನೊಬ್ಬರು ಅಸ್ವಸ್ಥರಾಗಿದ್ಧಾರೆ.
ಸುಮಾರು 80 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು ಅವರಿಗೆ ಮೆಗಾನ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಾತ್ದಿ ಹಲವರನ್ನು ಬಿಟ್ಟು ಉಳಿದವರನ್ನು ಮತ್ತೆ ಶಾಲೆಗೆ ಕರೆದುಕೊಂಡು ಹೋಗಲಾಗಿದೆ. ಬಹಳಷ್ಟು ಮಕ್ಕಳು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿ ದಿಢೀರನೆ ಮಕ್ಕಳು ಅಸ್ವಸ್ಥರಾಗಲು ಕಾರಣವಾದರೂ ಏನು? ಕಿಲುಬಿನ ಪಾತ್ರೆ ಅಥವಾ ಸಾಂಬಾರ್ ನಲ್ಲಿ ಹಾಕಿದ್ದ ವಸ್ತುಗಳೇ? ಅನ್ನ ಬೆಂದಿರಲಿಲ್ಲವೇ ಅಥವಾ ಸರ್ಕಾರ ನೀಡುವ ದವಸ ಧನ್ಯಗಳು ಸರಿ ಇರಲಿಲ್ಲವೇ ಎಂಬ ಹಲವು ಪ್ರಶ್ನೆಗಳು ಕೇಳಿ ಬಂದಿವೆ ಉತ್ತರ ಹುಡುಕುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ.
ಅಸ್ವಸ್ಥರಾದ ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಐದಕ್ಕೂ ಹೆಚ್ಚು ವೈದ್ಯರು ಹಾಗು ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಿದರು.
ಸುಮಾರು 250 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ವಸತಿ ಶಾಲೆಯಲ್ಲಿ ಮಕ್ಕಳು ಊಟವಾದ ಕ್ರಮೇಣ ಅಸ್ವಸ್ಥರಾಗಿದ್ದಾರೆ. ಮಕ್ಕಳಲ್ಲಿ ವಾಂತಿ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ಸ್ತಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಗಮನವಹಿಸಿದ್ಧಾರೆ. ಶಾಲೆಯ ಶಿಕ್ಷಕರೂ ಮಕ್ಕಳ ತಪಾಸಣೆಯಲ್ಲಿ ನೆರವಾಗಿದ್ದರು.
ಪರ್ಸೆಂಟೇಜ್ ಮಾಮೂಲಿ, ಈಗ ಸ್ವಲ್ಪ ಹೆಚ್ಚಾಗಿದೆ: ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಎನ್. ಮಂಜುನಾಥ್ ಹೀಗೆ ಹೇಳಿದ್ದೇಕೆ? https://tungataranga.com/?p=17645 ಲಿಂಕ್ ಬಳಸಿ ಸಂಪೂರ್ಣ ಸುದ್ದಿ ಓದಿ
ಮೈಕೊರೆಯುವ ಚಳಿಗೆ ನಡುಗಿದ ಶಿವಮೊಗ್ಗ, ಹೆಚ್ಚಿದ ಶೀತ, ಕೆಮ್ಮು, ಜ್ವರ, ಇದು ಕೊರೊನಾ ಅಲ್ಲರೀ..!? https://tungataranga.com/?p=17650 ಸಮಗ್ರ ಸುದ್ದಿ ಓದಲು ಲಿಂಕ್ ಕ್ಲಿಕ್ ಮಾಡಿ👆
ಅಗ್ನಿಶಾಮಕ ದಳದ ವೈಫಲ್ಯದಿಂದಲೇ ಶರತ್ ಭೂಪಾಳಂ ಸಾವು| ವಿರುದ್ದ ಕ್ರಮಕ್ಕೆ ಪ್ರತಿಭಟನೆ https://tungataranga.com/?p=17657
ಕೊಟ್ಟಿರುವ 👆👆ಲಿಂಕ್ ಬಳಸಿ ಸಂಪೂರ್ಣ ಸುದ್ದಿ ಓದಿ