ಶಿವಪ್ಪನಾಯಕ ಮಾರುಕಟ್ಟೆಯ ಬ್ಯಾರೀಸ್ ಮಾಲ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕುತಂತ್ರದ ರಾಜಕಾರಣ ಮಾಡುತ್ತಿದೆ ಎಂದು ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಪ್ಪ ನಾಯಕ ಮಾರುಟ್ಟೆಯನ್ನು ತೆರವುಗೊಳಿಸಿ ಮಾಲ್ ಅನ್ನು ಅಭಿವೃದ್ಧಿಪಡಿಸಿದವರೇ ಬಿಜೆಪಿಯವರು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇಂಧನ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಇದನ್ನು ಅಭಿವೃದ್ಧಿಪಡಿಸಿದರು. ಇಂತಹ ಶಿವಪ್ಪ ನಾಯಕ ಮಾರುಕಟ್ಟೆಯನ್ನು ಯಾವುದೇ ಕಾರಣಕ್ಕೂ ಬೇರೆಯವರ ಸೊತ್ತಾಗಲು ಬಿಡುವುದಿಲ್ಲ ಎಂದರು
.
ಕಾAಗ್ರೆಸ್ ಚುನಾವಣೆಯ ತಂತ್ರವಾಗಿ, ಕುತಂತ್ರವಾಗಿ ಸಲ್ಲದ ಆರೋಪವನ್ನು ಮಾಲ್ ಗೆ ಸಂಬಂಧಿಸಿದಂತೆ ಮಾಡುತ್ತಿದ್ದೆ. ಅಜೆಂಡಾದಲ್ಲಿ ಮಾಲಿಗೆ ಸಂಬಂಧಿಸಿದಂತೆ ವಿಷಯವನ್ನು ತರುವುದರಲ್ಲಿ ಅಧಿಕಾರಿಗಳ ಪಾತ್ರವಿದೆ. ಅಜೆಂಡಾದಲ್ಲಿ ಈ ವಿಷಯ ಬರಲು ಅಂದಿನ ಆಯಕ್ತರೇ ಕಾರಣ ಎಂದು ನೇರ ಆರೋಪ ಮಾಡಿದರು.
ಅಧಿಕಾರಿಗಳು ಆಡಳಿತ ಪಕ್ಷದ ಮಾತುಗಳನ್ನು ಕೇಳುವುದಿಲ್ಲವೇ. ನೀವು ಒಂದು ರೀತಿಯಲ್ಲಿ ಅಸಹಾಯಕರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಅಧಿಕಾರಿಗಳು ಕೆಲವೊಮ್ಮೆ ಮಾತುಗಳನ್ನು ಕೇಳುವುದಿಲ್ಲ. ಸಾಮಾನ್ಯ ಸಭೆಯಲ್ಲಿ ಯಾವ ವಿಷಯ ಬರಬೇಕು ಎಂಬ ಬಗ್ಗೆ ಚರ್ಚಿಸಲು ಮತ್ತು ಅಜೆಂಡಾ ಪಾಸಾಗಲು ಒಂದು ಸಮಿತಿಯನ್ನೆ ರಚಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಲಿಗೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ವಿಷಯ ಬರಲು ನಾನು ಕಾರಣನಲ್ಲ. ಇದಕ್ಕೆ ಅಂದಿನ ಅಧಿಕಾರಿಗಳೆ ಹೊಣೆ. ಆದರೆ ಈ ವಿಷಯ ಇಟ್ಟುಕೊಂಡು ಕಾಂಗ್ರೆಸ್, ಜೆಡಿಎಸ್ ಸದಸ್ಯರು ವಿನಾಕಾರಣ ನನ್ನನ್ನು ತೇಜೋವಧೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ಚುನಾವಣಾ ತಂತ್ರ ಮತ್ತು ಕುತಂತ್ರವಾಗಿದೆ ಎಂದು ಆರೋಪಿಸಿದರು.
ಹಾಗೆ ನೋಡಿದರೆ ಕಾಂಗ್ರೆಸ್ 2015ರ ಮಾರ್ಚ್ ತಿಂಗಳಲ್ಲಿ ನಡೆದ ಪಾಲಿಕೆ ಸಭೇಯಲ್ಲಿಯೆ ಈ ಮಾಲ್ ಅನ್ನು 60 ವರ್ಷಕ್ಕೆ ಲೀಸ್ ಅನ್ನು ಮುಂದುವರೆಸುವಂತೆ ಒತ್ತಾಯ ಮಾಡಿತ್ತು. ಆದರೆ ಬಿಜೆಪಿ ಸದಸ್ಯರು ಅಂದು ವಿರೋಧಿಸಿದ್ದರ ಪರಿಣಾಮವಾಗಿ 60 ವರ್ಷದ ಲೀಸ್ ತಪ್ಪಿದೆ. ಈ ವಿಷಯದ ಬಗ್ಗೆ ಕಾಂಗ್ರೆಸ್ ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದೆಯೇ ಹೊರತು ಬೇರೇನೂ ಅಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಯೋತ್ಪಾದನೆಗೆ ಶಕ್ತಿ ಮತ್ತು ಕುಮ್ಕಕ್ಕು ಕೊಡುವ ಹೇಳಿಕೆ ನೀಡಿರುವುದು ಖಂಡನೀಯ. ಅವರನ್ನು ಈ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಶಿವಕುಮಾರ್, ಸದಸ್ಯರಾದ ಜ್ಞಾನೇಶ್ವರ್, ಬಿಜೆಪಿ ನಗರ ಅಧ್ಯಕ್ಷ ಜಗದೀಶ್, ಪ್ರಮುಖರಾದ ಮೋಹನ್ ರೆಡ್ಡಿ ಮತ್ತಿತರರಿದ್ದರು.