ಇಂಡಿಯಾ ಸೈಬರ್ ಕಾಫ್ ಆಫ್ ಇಯರ್ ಪ್ರಶಸ್ತಿಯ ಪಟ್ಟಿಯಲ್ಲಿ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಟಿ. ಗುರುರಾಜ್ ಅವರಿಗೆ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗ ಸೈಬರ್ ಕ್ರೈಂ ಠಾಣೆಯಲ್ಲಿ ಅವರು ಸಲ್ಲಿಸಿದ ಸೇವೆಯ ಸಮಯದಲ್ಲಿ ಹಲವು ಪ್ರಮುಖ ದೂರುಗಳನ್ನು ಆದರಿಸಿ ರಾಜ್ಯ, ದೇಶ ವಿದೇಶಗಳ ವಂಚಕರಿಂದ ಆಗಿದ್ದ ವಂಚನೆಯನ್ನು ಪತ್ತೆ ಹಚ್ಚುವಲ್ಲಿ ಹಾಗೂ ನೊಂದ ವ್ಯಕ್ತಿಗೆ ನ್ಯಾಯ ಕೊಡಿಸುವಲ್ಲಿ ಗುರುರಾಜ್ ಹಾಗೂ ಅವರ ಪೊಲೀಸ್ ತಂಡ ಸಾಕಷ್ಟು ಶ್ರಮಿಸಿ ಯಶಸ್ಸು ಸಾಧಿಸಿತ್ತು.
ಕ್ಲಿಷ್ಟಕರವಾದ ಹಲವು ಸಮಸ್ಯೆಗಳನ್ನು ಅತ್ಯುತ್ತಮವಾಗಿ ಭೇದಿಸಿದ ತನಿಖಾಧಿಕಾರಿಗಳಿಗೆ ಕೊಡ ಮಾಡುವ ಇಂಡಿಯಾ ಸೈಬರ್ ಕಾಪ್ ಆಫ್ ಇಯರ್ ಪ್ರಶಸ್ತಿಗೆ ಗುರುರಾಜ್ ನಾಮನಿರ್ದೇಶನಗೊಂಡಿದ್ದಾರೆ.ಗುರುರಾಜ್ ರವರು ಹುಣಸೋಡು ಬಾಂಬ್ ಸ್ಫೋಟ, ಹರ್ಷ ಕೊಲೆ, ಫೆಕ್ಸಿ ಗಲಾಟೆ, ಶಂಕಿತ ಉಗ್ರರ ಪತ್ತೆ ಪ್ರಕರಣ ಸೇರದಂತೆ ಹಲವು ಪ್ರಕರಣಗಳನ್ನು ತಮ್ಮ ತಂಡದ ಜೊತೆ ಪತ್ತೆ ಹಚ್ವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗಷ್ಟೇ ಕಡೂರು ಪೊಲೀಸ್ ಟ್ರೈನಿಂಗ್ ಸೆಂಟರ್ ನಲ್ಲಿ ಉಪನ್ಯಾಸಕರಾಗಿ ವರ್ಗಾವಣೆಗೊಂಡು ಕಾರ್ಯನಿರ್ವಹಿಸುತ್ತಿರುವ ಗುರುರಾಜ್ ಅವರು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಸಂತಸದ ವಿಷಯ. ಅವರಿಗೆ ಈ ಪ್ರಶಸ್ತಿ ಲಭಿಸಲಿ ಎಂದು ಶಿವಮೊಗ್ಗ ಜನತೆ ಶುಭ ಕೋರುತ್ತದೆ. ಗುರುರಾಜ್ ಅವರ ಜೊತೆ ಮಧ್ಯಪ್ರದೇಶ ಭೂಪಾಲ್ ನ ಸೈಬರ್ ಅಂಡ್ ಹೈಟೆಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೀತೂ ಕನಸರಿಯಾ ಹಾಗೂ ಮುಂಬೈನ ವೆಸ್ಟ್ ರೀಸನ್ ಸೈಬರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುವರ್ಣ ಶಿಂದೆ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ