ಕೇವಲ ಎರಡೇ ವರ್ಷಗಳಲ್ಲಿ ಸಂಸ್ಕೃತದಲ್ಲಿ ಮಾತನಾಡಲು ಬರೆಯಲು ಮತ್ತು ಓದಲು ಕಲಿಸಿಕೊಡಲಾಗುವ ಶಿಕ್ಷಣವನ್ನು ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ಶಾಲೆಯ ವಾಸವಿ ಸಂಸ್ಕೃತ ವಿದ್ಯಾಲಯದ ವತಿಯಿಂದ
ಡಿಸೆಂಬರ್ ಮೊದಲ ವಾರದಿಂದ ಪ್ರಾರಂಬಿಸಲಾಗುವುದು.

ವಾರದಲ್ಲಿ ಸೋಮವಾರ, ಮಂಗಳವಾರ ಮತ್ತು ಬುಧವಾರ ದಿನಗಳಲ್ಲಿ ಸಂಜೆ 6.30 ರಿಂದ 7.30 ರ ವರೆಗೆ ಕೋಟೆ ರಸ್ತೆಯಲ್ಲಿರುವ ವಾಸವಿ ವಿದ್ಯಾಲಯದಲ್ಲಿ ತರಗತಿ ನಡೆಯುತ್ತದೆ.

16 ವರ್ಷ ಮೇಲ್ಪಟ್ಟವರು ಈ ಶಿಕ್ಷಣಕ್ಕೆ ಸೇರಬಹುದು. ಒಂದು ವರ್ಷದ ಶುಲ್ಕ ರೂ. 500.00 (ಪಾಠ, ಪರೀಕ್ಷೆ ಮತ್ತು ಪುಸ್ತಕ ಸೇರಿ),

ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಪಠ್ಯಕ್ರಮದ ಆಧಾರದ ಮೇಲೆ ಶಿಕ್ಷಣ ನೀಡಲಾಗುವುದು.

ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದಿಂದ ಪ್ರಮಾಣ ಪತ್ರ ನೀಡಲಾಗುವುದು

ಹೆಸರು ನೋಂದಾಯಿಸಲು ಕಡೆಯ ದಿನಾಂಕ 28-11-2022 ಹೆಚ್ಚಿನ ಮಾಹಿತಿಗಾಗಿ ವಾಸವಿ ವಿದ್ಯಾಲಯದ ಪ್ರಾಂಶುಪಾಲ ಮನುಬಿಸೆ +919916514066 ಇವರನ್ನು ಸಂಪರ್ಕಿಸಬಹುದು ಎಂದು ಯೋಜನೆಯ ಸಂಯೋಜಕ ಅ.ನಾ.ವಿಜಯೇಂದ್ರ ರಾವ್ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!