ಶಿವಮೊಗ್ಗ, ನ.03:

ಹೊನ್ನಾಳಿ ಶಾಸಕ, ಮಾಜಿ ಸಚಿವ, ಸಿ.ಎಂ. ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದೆ.


ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಅವರ ಬಿಳಿ ಬಣ್ಣದ ಕಾರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ಹೆಚ್. ಕಡದಕಟ್ಟೆಯಲ್ಲಿ ತುಂಗಾ ಮುಖ್ಯ ಕಾಲುವೆಯೊಳಗೆ ಪತ್ತೆಯಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಕಾರನ್ನು ಮೇಲಕೆತ್ತಿದ್ದು, ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗದ ಗೌರಿಗದ್ದೆಯ ವಿನಯ್ ಗುರೂಜಿ ಅವರನ್ನು ಭೇಟಿಯಾಗಿ ಬರುವಾಗ ಚಂದ್ರಶೇಖರ್, ಶಿವಮೊಗ್ಗದಿಂದ ವಾಪಸ್ ಆಗಿದ್ದರೂ ಹೊನ್ನಾಳಿ ನಿವಾಸಕ್ಕೆ ಬಂದು ತಲುಪಿರಲಿಲ್ಲ. ಅ.30ರ ರಾತ್ರಿಯಿಂದ ಚಂದ್ರಶೇಖರ್ ನಾಪತ್ತೆಯಾಗಿದ್ದರು ಎನ್ನಲಾಗಿತ್ತು.

ಚಂದ್ರಶೇಖರ್ ಪತ್ತೆಗಾಗಿ ದಾವಣಗೆರೆ ಎಸ್ ಪಿ ರಿಷ್ಯಂತ್ ನೇತೃತದಲ್ಲಿ ಪೊಲೀಸರು 4 ತಂಡ ರಚಿಸಿ ಹುಡುಕಾಟ ನಡೆಸಿದ್ದರು. ಆದರೆ ಈಗ ಚಂದ್ರಶೇಖರ್ ಕಾರು ತುಂಗಾ ನದಿಯಲ್ಲಿ ಬಿದ್ದಿದ್ದು, ಅವರ ಶವ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಸಾವು ಕೊಲೆಯೇ? ಆತ್ಮಹತ್ಯೆಯೇ? ಶಿವಮೊಗ್ಗ ಪ್ರೇಯಸಿಯ ಪ್ರಿಯಕರನ ಕೈವಾಡವೇ? ರಾಜಕೀಯ ದ್ವೇಶವೇ… ಸತ್ಯ ಗೊತ್ತಾಗಬೇಕಿದೆ.


By admin

ನಿಮ್ಮದೊಂದು ಉತ್ತರ

You missed

error: Content is protected !!