ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರಗತಿಪಥದತ್ತ ಮುನ್ನಡೆದಿದ್ದು, 2021-22ಕ್ಕೆ 22.99 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಹೇಳಿದರು.
ಅವರು ಇಂದು ಡಿಸಿಸಿ ಬ್ಯಾಂಕ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1953ರಲ್ಲಿ ಪ್ರಾರಂಭವಾದ ಡಿಸಿಸಿ ಬ್ಯಾಂಕ್ ಕೇವಲ 30 ಸಾವಿರ ಷೇರು ಬಂಡವಾಳ ಹೊಂದಿತ್ತು. ಇದೀಗ ಬ್ಯಾಂಕ್, 1244.36 ಕೋಟಿ ರೂ.ಗಳ ಠೇವಣಿಯನ್ನು ಸಂಗ್ರಹಿಸಿದೆ. ಷೇರು ಬಂಡವಾಳವೇ 129.50 ಕೋಟಿ ದಾಟಿದೆ. ಬ್ಯಾಂಕ್ ಈ ಸಾಲಿನ ಅಂತ್ಯಕ್ಕೆ 31.14 ಕೋಟಿ ಲಾಭ ಗಳಿಸಿದ್ದು, ಆ ಪೈಕಿ ರೂ.1.10 ಕೋಟಿ ತೆರಿಎ ಪಾವತಿಸಿ 22.99 ಕೋಟಿ ನಿವಳ ಲಾಭ ಗಳಿಸಿದೆ. ಬೆಂಗಳೂರು ವಿಭಾಗದಲ್ಲಿಯೇ ಅತಿಹೆಚ್ಚು ಲಾಭ ಗಳಿಸಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಲೆಕ್ಕಪರಿಶೋಧಕರು, ಅಪೆಕ್ಸ್ ಬ್ಯಾಂಕ್‍ನವರು ಬ್ಯಾಂಕಿನ ಸಾಧನೆಯನ್ನು ಗಮನಿಸಿ ‘ಎ’ ಶ್ರೇಣಿ ನೀಡಿದ್ದಾರೆ. 2013ರ ನಂತರ ಬ್ಯಾಂಕ್‍ನ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಸದಸ್ಯರಿಗೆ ಶೇ.6ರಷ್ಟು ಡಿವಿಡೆಂಡ್ ಅನ್ನು ನೀಡಲಾಗಿದೆ. ಇದೇ ಮೊದಲಬಾರಿಗೆ ಬ್ಯಾಂಕ್2517 ಕೋಟಿ ಗಳಷ್ಟು ಒಟ್ಟು ವ್ಯವಹಾರ ನಡೆಸಿದೆ ಎಂದರು.
ರೈತರ ಏಳಿಗೆಯನ್ನು ಸದಾ ಬಯಸುವ ಬ್ಯಾಂಕ್, 636 ರೈತರಿಗೆ 63.43 ಕೋಟಿ ಮಧ್ಯಮಾವಧಿ ಸಾಲ ನೀಡಿದೆ. ಒಟ್ಟು 6546 ಹೊಸ ರೈತರಿಗೆ 69 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್‍ನಿಂದ ಒಟ್ಟು 3052 ಗುಂಪುಗಳಿಗೆ 101.22 ಕೋಟಿ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಕೂಡ ಶೇ.99ರಷ್ಟಿದೆ. ಕೃಷಿಯೇತರ ಸಾಲವನ್ನೂ ಬ್ಯಾಂಕ್ ನೀಡಿದ್ದು, ಅದು 1403 ಕೋಟಿಯಾಗಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಂಘದ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ 1269 ಸದಸ್ಯರಿಗೆ 1.94 ಕೋಟ ಶಾಲ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲಾಗಿದೆ. ಸಹಾಯಧನ ನೀಡಲಾಗಿದೆ. ಬೆಳೆಸಾಲ ಪಡೆದ ರೈತರಿಗೆ ವೈಯಕ್ತಿಕ ಅಪಘಾತ ಪರಿಹಾರ ನೀಡಲಾಗಿದೆ. ಸರ್ಕಾರದ ನಿರ್ದೇಶನದಂತೆ “ಫ್ರೂಟ್ಸ್) ತಂತ್ರಾಂಶದ ಅಡಿಯಲ್ಲಿ ನೀಡಲಾಗುತ್ತಿದೆ ಎಂದರು.
ಬ್ಯಾಂಕ್ ಮುಂದಿನ ಹಂತದಲ್ಲಿ ಹಲವು ಗುರಿಗಳನ್ನು ಹೊಂದಿದೆ. ಮೊಬೈಲ್ ಬ್ಯಾಂಕಿಂಗ್ ಸೇವಾ ಸೌಲಭ್ಯ ಒದಗಿಸುವುದು. ಮೊಬೈಲ್ ಅಪ್ಲಿಕೆಷನ್ ಮತ್ತು ಬಿಬಿಪಿಎಸ್ ಸೌಲಭ್ಯ ಒದಗಿಸುವುದು. ಬ್ಯಾಂಕ್‍ನಿಂದ ಬಿಸಿನೆಸ್ ಕರೆಸ್ಪಾಂಡೆಂಟ್ ಮಾಡಿಕೊಂಡು ರೈತರಿಗೆ ಹಾಗೂ ಸ್ವಸಹಾಯ ಸಂಘದ ಸದಸ್ಯರ ಮನೆ ಬಾಗಿಲಿಗೆ ಸಾಲಸೌಲಭ್ಯ, ಬಾಂಕಿಂಗ್ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ ಎಂದರು.
ಮುಂದಿನ 2023ರ ಅಂತ್ಯಕ್ಕೆ 1350 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಹಾಗೆಯೇ 30 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಮೂರು ಹಂತದಲ್ಲಿ ಏಕರೂಪ ತಂತ್ರಾಂಶದ ಯೋಜನೆಯಡಿ ಗಣಕೀಕರಣಗೊಳಿಸಲಾಗುವುದು ಎಂದರು.
ಒಟ್ಟಾರೆ ಇತ್ತೀಚನ ವರ್ಷಗಳಲ್ಲಿ ಬ್ಯಾಂಕ್‍ನ ಬಗ್ಗೆ ಜನಸಾಮಾನ್ಯರಲ್ಲಿ ಅಪನಂಬಿಕೆ ಉಂಟಾಗಿತ್ತು. ಹಲವು ವಿವಾದಗಳ ಸುಳಿಗೆ ಸಿಲುಕಿತ್ತು. ಇದೀಗ ಬ್ಯಾಂಕ್ ಆ ಎಲ್ಲಾ ಸುಳಿಗಳಿಂದ ಪಾರಾಗಿ ಅತ್ಯುತ್ತಮ ಬ್ಯಾಂಕ್ ಎಂಬ ಹೆಸರು ಪಡೆದು ರೈತರ ಜೀವನಾಡಿಯಾಗಿ ಸಹಕಾರ ತತ್ವಗಳನ್ನ ಮೈಗೂಡಿಸಿಕೊಂಡು ರಾಜ್ಯದಲ್ಲಿಯೇ ಉತ್ತಮ ಬ್ಯಾಂಕ್ ಎಂದು ಹೆಸರು ಪಡೆದು ಅತ್ಯುನ್ನತ ಸ್ಥಾನ ಹೊಂದಿದೆ. ಪ್ರಗತಿಯಲ್ಲಿದೆ. ಇದಕ್ಕೆಲ್ಲಾ ಕಾರಣರಾದ ಸಿಬ್ಬಂದಿಗಳಿಗೆ ಠೇವಣಿದಾರರಿಗೆ ರೈತ ಸಮುದಾಯಕ್ಕೆ ಸ್ವಸಹಾಯ ಸಂಘಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎಲ್. ಷಡಾಕ್ಷರಿ, ಜೆ.ಪಿ. ಯೋಗೀಶ್, ದುಗ್ಗಪ್ಪಗೌಡ, ಎಸ್.ಪಿ. ದಿನೇಶ್, ಪರಮೇಶ್ವರ್, ಸುಧೀರ್, ಹೆಚ್.ಕೆ. ವೆಂಕಟೇಶ್, ಸಿಇಓ ನಾಗೇಶ್ ಡೋಂಗ್ರೆ ಇದ್ದರು.