ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಬಿಗಿ ಭದ್ರತೆ| ೩ ಸಾವಿರ ಪೊಲೀಸರು | 300 ಸಿಸಿ ಕ್ಯಾಮೆರಾಗಳ ಕಣ್ಗಾವಲು | 10 ಡ್ರೋನ್ | 60 ಕ್ಕೂ ಹೆಚ್ಚು ವಿಡಿಯೋ ಕ್ಯಾಮೆರಾ | ರ‍್ಯಾಪಿಡ್ ಆಕ್ಷನ್ ಪೋರ್ಸ್ ಜೊತೆ ಕ್ಯೂಆರ್‌ಟಿ

ಶಿವಮೊಗ್ಗ, ಸೆ.07:
ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಹಿಂದೂ ಮಹಾ ಸಭಾ ಸಮಿತಿ ಸಕಲ ಸಿದ್ದತೆ ನಡೆಸುತ್ತಿದೆ. ಮತ್ತೊಂದೆಡೆ ಶಿವಮೊಗ್ಗ ಜಿಲ್ಲಾ ರಕ್ಷಣಾ ಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ವಿಸರ್ಜನಾ ಪೂರ್ವ ಮೆರವಣಿಗೆ ಹಾಗೂ ಅದ್ದೂರಿ ಕಾರ್ಯಕ್ರಮದೊಳಗೆ ಗೊಂದಲಗಳು, ಗಲಾಟೆ ಹತ್ತಿಕ್ಕಲು ಭಾರಿ ಭದ್ರತಾ ಕ್ರಮಕ್ಕೆ ಮುಂದಾಗಿದ್ದು, ಅಂದು ನಗರದಲ್ಲಿ ಸುಮಾರು 3 ಸಾವಿರಕ್ಕೂ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.
ಸೆ.09 ರ ದಿನದ ಕ್ಷಣಗಣನೆಯಲ್ಲಿ ಹಿಂದೂ ಮಹಾಸಭಾ ಸಮಿತಿಯು ನಗರ ವನ್ನು ವೈಭವದಿಂದ ಅಲಂಕಾರಗೊಳಿಸಲು ಸಿದ್ದತೆ ಮಾಡುತ್ತಿರುವುದು ಕಂಡು ಬರುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಗಣಪತಿ ವಿಸರ್ಜನಾ ಮೆರವಣಿಗೆ ಮಾರ್ಗ ಬದಲಾವಣೆಯಾಗಿಲ್ಲ. ಆದರೆ ಆ ಸಂದ ರ್ಭದಲ್ಲಿ ವಾಹನಗಳ ಓಡಾಟಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ.

ಬರುವ ಸೆ.09 ರಂದು ಶಿವಮೊಗ್ಗ ನಗರದ ಹಿಂದೂಮಹಾಸಭಾ ಗಣಪತಿ ವಿಸರ್ಜನೆ ಹಾಗೂ ಅದರ ಪೂರ್ವದ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರ ಬೀಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ವಿಘ್ನವಿನಾಶಕ ವಿನಾಯಕನ ಎಲ್ಲಾ ಭಕ್ತಾಧಿಗಳು ಹಾಗೂ ಸಮಾಜದ ಸಮಸ್ತರು ಅತ್ಯಂತ ಶಾಂತಿ ಹಾಗೂ ಸುವ್ಯವಸ್ಥೆಯಿಂದ ಭಕ್ತಿಪ್ರಧಾನವಾದ ಈ ಆಚರಣೆಯಲ್ಲಿ ಪಾಲ್ಗೊಳ್ಳಬಹುದು. ಸಿಸಿಕ್ಯಾಮೆರಾಗಳು, ವಿಡಿಯೋ ಕ್ಯಾಮೆರಾಗಳು, ಡ್ರೋಣ್‌ಗಳು ಸೇರಿದಂತೆ ಪೊಲೀಸರ ಸರ್ಪಗಾವಲು ಪ್ರತಿಕ್ಷಣದ ಮಾಹಿತಿಯನ್ನು ಹಿಡಿದಿಡುವಂತಹ, ಕ್ರೂಢೀಕರಿಸುವಂತಹ ವ್ಯವಸ್ಥೆಯನ್ನು ಹೊಂದಲಾಗಿದೆ. ಎಲ್ಲರೂ ಶಾಂತಿಯುತವಾಗಿ, ಭಕ್ತಿಪ್ರಧಾನವಾಗಿ ಆಚರಣೆಯಲ್ಲಿ ಪಾಲ್ಗೊಳ್ಳಬಹುದು.
-ಬಾಲರಾಜ್, ಡಿವೈಎಸ್‌ಪಿ,


ರಕ್ಷಣೆ ಹೇಗಿರುತ್ತೆ:


ನಗರದ ಪ್ರಮುಖ ಸ್ಥಳಗಳಲ್ಲಿ ಸರಿಸುಮಾರು 300 ಸಿಸಿ ಕ್ಯಾಮೆರಾಗಳು ಜನರನ್ನು ವೀಕ್ಷಿಸಲಿವೆ. ಪರಿಸ್ಥಿತಿಯನ್ನು ಹತೋಟಿಗಿಡಲು ಸಹಕಾರಿಯಾಗಿವೆ. 60ಕ್ಕೂ ಹೆಚ್ಚು ವಿಡಿಯೋ ಕ್ಯಾಮೆರಾ ಗಳು, ಹತ್ತು ಡ್ರೋಣ್ ಕ್ಯಾಮೆರಾಗಳನ್ನು ಬಳಸಿಕೊಳ್ಳಲಿರುವ ಪೊಲೀಸ್ ಇಲಾಖೆ ಈಗಾಗಲೇ 11 ಮಂದಿ ರೌಡಿ ಎಲಿಮೆಂಟಿನವರನ್ನು ಈ ವರ್ಷ ಗಡಿ ಪಾರು ಮಾಡಿದೆ. ಗೂಂಡಾ ಕಾಯ್ದೆಯಡಿ ಬಂಧನವಾಗಿದ್ದ 4 ಜನರ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ.
ಶಿವಮೊಗ್ಗ ನಗರದಲ್ಲಿ ಈ ಭಾರಿ ಗಣಪ ವಿಸರ್ಜನೆ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ಪೊಲೀಸರು ಸಿವಿಲ್ ಡ್ರಸ್‌ನಲ್ಲಿ ಭಕ್ತರ ಜೊತೆ ಇರಲಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಇಡೀ ನಗರದ ಗಣಪ ವಿಸರ್ಜನಾ ಮೆರವಣಿಗೆಯ ಮಾರ್ಗದಲ್ಲಿ ಪೊಲೀಸರ ಕಣ್ಣು ಕ್ರಮಕೈಗೊಳ್ಳುತ್ತಿರುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!