ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ನನ್ನೆಲ್ಲಾ ಆತ್ಮೀಯ ಹಿರಿಯ-ಕಿರಿಯ ಗುರು ವೃಂದಕ್ಕೆ ಪ್ರೀತಿಯ, ಆತ್ಮೀಯ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಒಂದು ಬದುಕನ್ನು ಸುಂದರವಾಗಿ ಕಟ್ಟಿಕೊಡುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಉಳಿವಿಗೆ ಕಾರಣರಾದ ಶಿಕ್ಷಕರಿಗೆ ಅತ್ಯಂತ ಗೌರವ ಪೂರ್ವಕ ಪ್ರಣಾಮಗಳು.


ನಾ ಗಜೇಂದ್ರ ಸ್ವಾಮಿ, ಪತ್ರಕರ್ತ ಎನಿಸಿಕೊಳ್ಳುವುದಕ್ಕಿಂತ ನಮ್ ಅರಹತೊಳಲು ಮೇಸ್ಟ್ರ ಮಗ ಎನಿಸಿಕೊಳ್ಳುವುದರಲ್ಲಿ ಅತ್ಯಂತ ಸಂತೋಷವಿದೆ. ತಂದೆಯ ಶಿಕ್ಷಕ ವೃತ್ತಿಯ ಜೊತೆಗೆ ಅವರು ಹಾಕಿಕೊಟ್ಟ ಬದುಕ ಗೆರೆಯಲ್ಲಿ ಈಗ ನಾನೂ ಇದ್ದೇನೆ ಎನಿಸುವಂತೆ ಮಾಡಿದೆ ಎಂದು ಮುಕ್ತವಾಗಿ ಹೇಳುತ್ತೇನೆ.
ಒಂದನೇ ಕ್ಲಾಸಿಂದ ಓದು ಮುಗಿಸಿರುವಷ್ಟು ಕಾಲ ನನಗೆ ಅಕ್ಷರ ಜ್ಞಾನ ನೀಡಿದ ಗುರುಗಳಿಗೆ, ಹಾಗೆಯೇ ಇಂದಿನವರೆಗೂ ಬದುಕ ಹೆಜ್ಜೆಯಲ್ಲಿ ಸೂಕ್ತ ಸಲಹೆ, ಸೂಚನೆ ನೀಡುತ್ತಿರುವ ನನ್ನ ಆತ್ಮೀಯ ಶಿಕ್ಷಕ ಮನಸುಗಳಿಗೆ ಅತ್ಯಂತ ಅಬಾರಿಯಾಗಿ ಈ ಸಂದರ್ಭದಲ್ಲಿ ಗೌರವಿಸುತ್ತೇನೆ.
ಅಂತೆಯೇ ಎಲ್ಲಾ ಶಿಕ್ಷಕ ವೃಂದಕ್ಕೆ ಮತ್ತೊಮ್ಮೆ ಧನ್ಯವಾದಗಳು. ಭಾಷಾ ಪ್ರಯೋಗ, ಅಕ್ಷರ ಜ್ಞಾನ, ಸಾಮಾಜಿಕ ವರ್ತನೆ, ತಿಳುವಳಿಕೆ, ಬುದ್ಧಿವಂತಿಕೆ, ಎಲ್ಲವನ್ನು ನಮಗೆ ದಾರೆಯೆರೆದ ಗುರು ವೃಂದಕ್ಕೆ ನನ್ನ ಪ್ರಣಾಮಗಳು.
ಎಸ್ ಕೆ ಗಜೇಂದ್ರ ಸ್ವಾಮಿ, ತುಂಗಾತರಂಗ ದಿನಪತ್ರಿಕೆ

By admin

ನಿಮ್ಮದೊಂದು ಉತ್ತರ

error: Content is protected !!