ಶಿವಮೊಗ್ಗ,
ರಾಷ್ಟ್ರದ್ರೋಹದ ಚಟುವಟಿಕೆ ನಡೆಸುವವರನ್ನು ಎಲ್ಲಿಡಬೇಕೋ ಅಲ್ಲಿಟ್ಟಿದ್ದೇವೆ. ಅವರೆಲ್ಲ ಈಗ ಜೈಲಿನಲ್ಲಿದ್ದಾರೆ. ಮತ್ತೆ ತಲೆಹರಟೆ ಮಾಡಿದರೆ ಎಲ್ಲಿಡಬೇಕೋ ಅಲ್ಲಿಡುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.


ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಅಪೇಕ್ಷೆಯಂತೆ ಶಿವಮೊಗ್ಗ ಶಾಂತವಾಗಿದೆ. ರಾಷ್ಟ್ರದ್ರೋಹದ ಚಟುವಟಿಕೆ ನಡೆಸುವವರಿಗೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದೇವೆ. ಅವರೆಲ್ಲ ಈಗ ಬಾಲ ಮುದುಡಿಕೊಂಡಿದ್ದಾರೆ. ಮತ್ತೆ ಬಾಲ ಬಿಚ್ಚಿದರೆ ಏನು ಮಾಡಬೇಕೋ ಅದನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಮುರುಘಾ ಶ್ರೀ ಬಂಧನ ಸಂಬಂಧ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಮಠದ ಸ್ವಾಮೀಜಿಗಳು ನನಗೆ ದೇವರ ಸಮಾನ. ಮುರುಘಾ ಶ್ರೀಗಳ ಬಗ್ಗೆಯು ಗೌರವ ಇದೆ. ತನಿಖೆಯಲ್ಲಿ ಅದು ಸತ್ಯವೋ ಸುಳ್ಳೋ ಎಂಬುದು ಹೊರಬರಲಿ. ಈಗಲೇ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದರು.


೭೫ ಕೋಟಿ ರೂ. ಖರ್ಚು ಮಾಡಿ ಸಿದ್ದರಾಮೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಜನರನ್ನು ಕರೆದುಕೊಂಡು ಬಂದಿದ್ದರು. ಆದರೆ ಮಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಕಾರ್ಯಕರ್ತರ ಶಕ್ತಿಯಿಂದ ಜನರು ತಾವಾಗಿಯೆ ಬಂದರು ಎಂದರು.

By admin

ನಿಮ್ಮದೊಂದು ಉತ್ತರ

You missed

error: Content is protected !!