ಶಿವಮೊಗ್ಗ, ಸೆ.03: ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಶುಕ್ರವಾರ ನಡೆದ ಗಣೇಶ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆಯು ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಭಾವೈಕ್ಯತೆಗೆ ಸಾಕ್ಷಿಯಾಯಿತು. ಇದು ಅನಗತ್ಯವಾಗಿ ಪದೇ ಪದೇ ಇಂತಹುದೇ ಕಿರಿಕ್ ಮಾಡುವವರಿಗೊಂದು ಪಾಠವೂ ಆಯಿತು.


ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿರುವ ಹಾಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಶುಕ್ರವಾರ ಸಂಜೆ ವಿಗ್ರಹದ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಿತು.
ಮೆರವಣಿಗೆಯ ಆರಂಭದಿಂದ ಅಂತ್ಯದವರೆಗೆ ಸ್ಥಳೀಯ ಜಾಮೀಯಾ ಮಸೀದಿ ಅಧ್ಯಕ್ಷರಾದ ಶಬ್ಬರ್ ಖಾನ್, ಮುಖಂಡರಾದ ಮಕ್ಬುಲ್ ಅಹಮದ್, ಯುವಕರಾದ ಮುಸ್ಸಿ ಗೌಡ್ರು, ನಿಜಾಮ್, ಇರ್ಫಾನ್ ಮೊದಲಾದವರು ಭಾಗಿಯಾಗಿದ್ದರು.
ಎರಡು ಸಮುದಾಯಗಳ ಮುಖಂಡರು ಜೊತೆಜೊತೆಯಾಗಿ ಹೆಜ್ಜೆ ಹಾಕಿ ಗಮನ ಸೆಳೆದರು. ಗಣಪತಿ ಸಮಿತಿಯ ಮುಖಂಡ ರಾಜು, ಹನುಮಂತಪ್ಪ ಸೇರಿದಂತೆ ದೇವಾಲಯ ಸಮಿತಿಯ ಪ್ರಮುಖರು ಮೆರವಣಿಗೆಯಲ್ಲಿದ್ದರು.

ಸುದ್ದಿ ಮೂಲ: ರೇಣುಕೇಶ್, ಪತ್ರಕರ್ತರು

By admin

ನಿಮ್ಮದೊಂದು ಉತ್ತರ

You missed

error: Content is protected !!