ಶಿವಮೊಗ್ಗ,ಸೆ.03:
ಮ್ಯಾಟ್ರಿಮೋನಿಯಲ್ ನಲ್ಲಿ ಪರಿಚಯವಾದ ಗಂಡು ಮದುವೆಯಾಗುವುದಾಗಿ ನಂಬಿಸಿ ಯುವತಿಯಿಂದ 13,55,000 ಲಕ್ಷ ರೂ ವಂಚಿರುವ ಘಟನೆ ನಡೆದಿದೆ. ಈ ಬಗ್ಗೆ ಶಿವಮೊಗ್ಗ ಸಿಎನ್ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಮದುವೆಯಾಗಲು ಒಕ್ಕಲಿಗ ಮ್ಯಾಟ್ರಿಮೋನಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಯುವತಿ ಯುವಕನನ್ನ ಹುಡುಕಿದಾಗ ವಿಜಯ್ ರಾಜ್ ಗೌಡ ಎಂಬ ಯುವಕನಿಗೆ ಲೈಕ್ ಕಳುಹಿಸಿ ತಮ್ಮ ಆಯ್ಕೆಯನ್ನ ತಿಳಿಸಿರುತ್ತಾರೆ. ವಿಜಯ್ ರಾಜ್ ಗೌಡ ನೂ ಸಹ ಯುವತಿಗೆ ಲೈಕ್ ತೋರಿಸಿ ಇಷ್ಟ ಇದ್ದರೆ ಮಾತನಾಡಬಹುದು ಎಂದು ನಂಬರ್ ಕಳುಹಿಸಿರುತ್ತಾನೆ.


ಜುಲೈನಲ್ಲಿ ಇಬ್ವರಿಗೂ ಪರಿಚಯವಾಗುತ್ತದೆ. ಇಬ್ಬರೂ ಪರಸ್ಪರ ಫೊನ್ ನಲ್ಲಿ ಮಾತಾಡಿಕೊಂಡಿರುತ್ತಾರೆ. ಕಳೆದ ಆಗಸ್ಟ್ 5.ರಂದು ಯುವಕ ವಿಜಯ್ ರಾಜ್ ಗೌಡ ನನ್ನ ಮನೆ ಮತ್ತು ಕಚೇರಿಯ ಮೇಲೆ ಐಟಿ ರೈಡ್ ಆಗಿದೆ ಹಣಕೊಟ್ಟಿರು ಎಂದು ಆ.5 ರಿಂದ ಆ.22 ರವರೆಗೆ ವಿವಿಧ ಹಂತವಾಗಿ ಯುವತಿಯ ಬಳಿ 13,55000/- ರೂ ಹಣ ಪಡೆದಿರುತ್ತಾನೆ.


ಇನ್ನೂ ಹಣ ಬೇಕು ಎಂದು ಯುವತಿಗೆ ಯುವಕ ಪೀಡಿಸಲು ಆರಂಭಿಸುತ್ತಾನೆ. ಹಣಕೊಡಲು ಯುವತಿ ನಿರಾಕರಿಸುತ್ತಾಳೆ. ನಂತರ ಯುವತಿ ಕರೆ ಮಾಡಿದ್ದಕ್ಕೆ ಯುವಕ ಮೊಬೈಲ್ ಕರೆ ಸ್ವೀಕರಿಸಲು ನಿರಾಕರಿಸುತ್ತಾನೆ. ಯುವತಿ ಎಫ್ ಡಿ ಹಣ ಮತ್ತು ಕೈಸಾಲ ಮಾಡಿಕೊಂಡು ಹಣ ಕಳುಹಿಸಿದ್ದು ನಂತರ ಸ್ನೇಹಿತರ ಬಳಿ ಚರ್ಚಿಸಿ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!