ಬೆಂಗಳೂರು,ಸೆ.04:
ಕೊರೋನಾ ಸೋಂಕಿನ ಭೀತಿಯ ನಡುವೆಯೂ ಗ್ರಾಮಪಂಚಾಯ್ತಿ ಸಾರ್ವತ್ರಿಕ ಚುನಾವಣೆ-2020 ಅನ್ನು ನಡೆಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಂತೆ ಪ್ರಾಮಾಣಿತ ಕಾರ್ಯ ನಿರ್ವಹಣಾ ಪದ್ದತಿ(ಎಸ್‌ಒಪಿ) ಅನುಸರಿಸುವುದು ಕಡ್ಡಾಯವಾಗಿದೆ.
ಈ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಯವರು ಕೋವಿಡ್-19 ಹಿನ್ನಲೆಯಲ್ಲಿ ಗ್ರಾಮ ಪಂಚಾಯ್ತಿಗಳ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಅನುಸರಿಸಬೇಕಾದ ಪ್ರಾಮಾಣಿತ ಕಾರ್ಯ ನಿರ್ವಹಣಾ ಪದ್ದತಿ(ಎಸ್‌ಒಪಿ) ಕರಡನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಚುನಾವಣಾ ಆಯೋಗವು ಗ್ರಾಮಪಂಚಾಯ್ತಿ ಸಾರ್ವತ್ರಿಕ ಚುನಾವಣೆ-2020ರ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಲು ಈ ಕೆಳಕಂಡ ಪ್ರಮಾಣಿಕ ಕಾರ್ಯನಿರ್ವಾಹಣಾ ಪದ್ಧತಿ(ಎಸ್‌ಒಪಿ) ಅನ್ನು ರಚಿಸಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಸಾಮಾನ್ಯ ಮಾರ್ಗಸೂಚಿಗಳು
ಚುನಾವಣೆಯಲ್ಲಿ ನಿರತರಾಗಿರುವ ಪ್ರತಿಯೊಬ್ಬರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ.
ಚುನಾವಣಾ ಕಾರ್ಯಕ್ಕೆ ಉಪಯೋಗಿಸುವಂತಹ ಕೊಠಡಿಯನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬರು ಕೈಗಳನ್ನು ಸ್ಯಾನಿಟೈಸರ್ ನಿಂದ ಶುಚಿಗೊಳಿಸುವುದು.
ಥರ್ಮಲ್ ಸ್ಕ್ರೀನಿಂಗ್ ನಿಂದ ಪರೀಕ್ಷೆಸಿಕೊಳ್ಳುವುದು ಕಡ್ಡಾಯ
ಪ್ರತಿ ಹಂತದಲ್ಲೂ ರಾಜ್ಯ ಸರ್ಕಾರವು ಹೊರಡಿಸಿರುವ ಕೋವೃ-19 ನಿಯಂತ್ರಣದ ಮಾರ್ಗಸೂಚಿಗಳನ್ವಯ ಪ್ರತಿಯೊಬ್ಬರು ಭೌತಿಕ ಅಂತರವನ್ನು ಕಾಯ್ದುಕೊಳ್ಳುವುದು
ಚುನಾವಣಾ ಕಾರ್ಯಗಳನ್ನು ಸಾಧ್ಯವಾದಷ್ಟು ವಿಶಾಲವಾದ ಕೊಠಡಿಗಳಲ್ಲಿ ನಿರ್ವಹಿಸುವುದು.
ಅಭ್ಯರ್ಥಿಗಳ ಚುನಾವಣಾ ಪ್ರಚಾರ ನಿಯಮಗಳು
ಅಭ್ಯರ್ಥಿಗಳ ಪ್ರಚಾರವು ಕ್ಷೇತ್ರಕ್ಕೆ ಸೀಮಿತವಾಗಿದ್ದು, ಕಡಿಮೆ(ಗರಿಷ್ಠ-5 ಜನ) ಬೆಂಬಲಿಗರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬೇಕು. ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಫೇಸ್ ಮಾಸ್ಕ್ ಧರಿಸಿರಬೇಕು. ಆದಷ್ಟು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಪ್ರಚಾರ ಮಾಡಬಹುದು.
ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು. ಹಂಚುವವರು ಖಡ್ಡಾಯವಾಗಿ ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಿರಬೇಕು. ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಬೇಕು
ಕೋವಿಡ್-19 ಹಿನ್ನಲೆಯಲ್ಲಿ ಗುಂಪು ಗುಂಪಾಗಿ ಪ್ರಚಾರ ಮಾಡುವಂತಿಲ್ಲ ಹಾಗೂ ಧ್ವನಿವರ್ದಕ/ಲೌಡ್ ಸ್ಪೀಕರ್ಸ್ ಬಳಸುವಂತಿಲ್ಲ
ಕೋವಿಡ್-19 ಪಾಸಿಟೀವ್ ಇರುವಂತ ಅಭ್ಯರ್ಥಿಗಳು ಎಲೆಕ್ಟ್ರಾನಿಕ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದಾಗಿದೆ. ಖುದ್ದಾಗಿ ಸಾಮಾನ್ಯ ಜನರೊಂದಿಗೆ, ಸಮುದಾಯದಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ
ಸಭೆ, ಸಮಾರಂಭವನ್ನು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ನಡೆಸಬಹುದಾಗಿರುತ್ತದೆ.
(ಸಾಮಾಜಿಕ ಜಾಲತಾಣದಲ್ಲಿ
ವಸಂತ ಬಿ ಈಶ್ವರಗೆರೆ)

9ಪುಟಗಳ ಟಿಪ್ಪಣಿ ಹೊರಬಂದಿದೆ

By admin

ನಿಮ್ಮದೊಂದು ಉತ್ತರ

error: Content is protected !!