ಶಿವಮೊಗ್ಗ,ಆ.30:
ಮೈದುಂಬಿ ಕಂಗೊಳಿಸುತ್ತಿರುವ ಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೆ.2ರಂದು ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿಯವರೆಗೆ ಕಾರ್ಯಕ್ರಮ ನಿಗಧಿಯಾಗಿಲ್ಲ ಎನ್ನುತ್ತಿದ್ದರೂ ಸಹ ತುಂಬಿದ ಭದ್ರೆಗೆ ಬಾಗಿನ ಅರ್ಪಣೆಯ ಕಾರ್ಯಕ್ರಮದ ಜೊತೆ ಅಂಜನಾಪುರ ಜಲಾಶಯಕ್ಕೂ ಬಾಗಿನ ಅವರ ಅರ್ಪಿಸಿ ಜಿಲ್ಲೆಯ ಅಭಿವೃದ್ದಿ ಕಾರ್ಯಕ್ರಮ ನಡೆಸಲು ಯಡಿಯೂರಪ್ಪ ಮನಸು ಮಾಡಿದ್ದಾರೆನ್ನಲಾಗಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ 12.15ಕ್ಕೆ ಭದ್ರಾ ಜಲಾಶಯದ ಹೆಲಿಪ್ಯಾಡ್’ಗೆ ಆಗಮಿಸುವ ಮುಖ್ಯಮಂತ್ರಿಗಳು ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ಹೇಳಲಾಗಿದ್ದು, ಆಕಸ್ಮಾತ್ ಅನಿವಾರ್ಯ ಕಾರ್ಯಕ್ರಮ ಇದ್ದರೆ ಇದು ಮರುದಿನ ಅಂದರೆ ಸೆ.3ಕ್ಕೆ ಮುಂದೂಡಲಿದೆ ಎಂದು ನಿಖರ ಮೂಲಗಳು ತಿಳಿಸಿವೆ.
ಒಟ್ಟಾರೆ ತವರಿಗೆ ನಾಡದೊರೆ ಆಗಮಿಸುವ ಎಲ್ಲಾ ಸಿದ್ದತೆಗಳಿಗೆ ಪೂರಕ ವಾತಾವರಣ ಕಂಡುಬರುತ್ತಿದೆ.