ಶಿವಮೊಗ್ಗ:
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ನ್ಯಾಯಾಲಯವು 20 ವರುಷ ಜೈಲು ಶಿಕ್ಷೆ ವಿಧಿಸಿದೆ.
ಸಮಗ್ರ ಸುದ್ದಿ ವಿವರ ಇಂತಿದೆ.
ದಿನಾಂಕಃ-05-12-2020 ರಂದು ಸಂಜೆ ತೀರ್ಥಹಳ್ಳಿ ತಾಲ್ಲೂಕಿನ 05 ವರ್ಷದ ಅಪ್ರಾಪ್ತ ವಯ್ಯಸ್ಸಿನ ಹೆಣ್ಣು ಮಗುವೊಂದು ತನ್ನ ಮನೆಯಲ್ಲಿ ಆಟವಾಡುತ್ತಾ ಇದ್ದಾಗ ವೆಂಕಟೇಶ್ ಎಂಬುವವನು ಸದರಿ ಬಾಲಕಿಯನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.


ಆಗಿನ ತನಿಖಾಧಿಕಾರಿಗಳಾದ ಪ್ರವೀಣ್ ನೀಲಮ್ಮನವರ್, ಸಿಪಿಐ, ತೀರ್ಥಹಳ್ಳಿ ವೃತ್ತರವರು ಪ್ರಕರಣದ ತನಿಖೆ ಕೈಗೊಂಡು ಸದರಿ ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, The Addl District and Sessions Court, FTSC–II (POCSO) Shivamogga ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶರಾದ ಮೋಹನ ಜೆ.ಎಸ್ ರವರು ದಿನಾಂಕ 16-07-2022 ರಂದು ಆರೋಪಿ ವೆಂಕಟೇಶ್, ಬಿ.ಸಿ, 29 ವರ್ಷ ಈತನ ವಿರುದ್ಧ ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60,000/- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 06 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!