ಶಿವಮೊಗ್ಗ ಆ.23:

ಶಿವಮೊಗ್ಗದಲ್ಲಿ ಇದೇ ತಿಂಗಳ 25 ರಂದು ಜಾತ್ಯಾತೀತ ಜನತಾದಳದ ನೇತೃತ್ವದಲ್ಲಿ ‘ಸಮಾನ ಮನಸ್ಕ ಪ್ರಗತಿಪರ ಸಂಘಟನೆ ‘ ಗಳ ಸಹಯೋಗದೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆ, ಭೂಸುಧಾರಣೆ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ವಿರುದ್ಧ ಆಯೋಜಿಸಿದ್ದ ಜನಜಾಗೃತಿಯ ವಿಚಾರ ಸಂಕೀರ್ಣದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಭಾಗವಹಿಸಬೇಕಿತ್ತು.

ಕಾರಣಾಂತರದಿಂದ ಅವರ ಪ್ರವಾಸರದ್ದಾಗಿದೆ ಎಂದು ಕರ್ನಾಟಕ ರಾಜ್ಯ ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿಗಳಾದ ಎಂ.ಶ್ರೀಕಾಂತ್‍ರವರು ತಿಳಿಸಿದ್ದಾರೆ.

ಅನಿವಾರ್ಯ ಕಾರಣಗಳಿಂದ ದೇವೇಗೌಡರು ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಈ ತಿಂಗಳು ಆಗಸ್ಟ್ 25 ರಂದು ನಡೆಯಬೇಕಿದ್ದ ಜನಜಾಗೃತಿ ವಿಚಾರ ಸಂಕಿರ್ಣವನ್ನು ಮುಂದೂಡಲಾಗಿದೆ.

ಮುಂದಿನ ಸಭೆಯ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಎಂ. ಶ್ರೀಕಾಂತ್‍ರವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!