ಹೊಸನಗರ:
ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯ ಯೋಜನೆಯಡಿ ಪರಿಹಾರ ಪಡೆಯಲು ಬಂದು ಅಧಿಕಾರಿಗಾಗಿ ಕಾದು ಕಾದು ಸುಸ್ತಾದ ವೃದ್ಧೆಯೊಬ್ಬರು ಕುಸಿದು ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ಅಂದು ಬೆಳಿಗ್ಗೆ 9.30ರ ಸುಮಾರಿಗೆ ಪಿಂಚಣಿ ಸೌಲಭ್ಯ ಮಾಡಿಸಲು ನಿಟ್ಟೂರು ಗ್ರಾಮ ಲೆಕ್ಕಿಗರ ಕಚೇರಿಗೆ ವೃದ್ಧೆ ಸಾಕಮ್ಮ ಬಂದಿದ್ದಾರೆ. ಅಲ್ಲದೆ ಇದಕ್ಕಾಗಿ ಅವರು ಹೆಬ್ಬಿಗೆಯಿಂದ ನಡೆದುಕೊಂಡೇ ಬಂದಿದ್ದರು.
ಆದರೆ, ಗ್ರಾಮಲೆಕ್ಕಿಗ ಮಂಜಪ್ಪ ಮಧ್ಯಾಹ್ನವಾದರೂ ಬಾರದ ಕಾರಣ ಕಾದು ಕಾದು ಸುಸ್ತಾದ ಸಾಕಮ್ಮ ಅಲ್ಲೆ ಕುಸಿದು ಬಿದ್ದಿದ್ದಾರೆ. ಮೊದಲಿನಿಂದು ಅವರು ಬರುತ್ತಾರೆ ಎಂದು ವಿ ಎ ಅವರ ಪರವಾಗಿ ಹೇಳುತ್ತಿದ್ದರೆನ್ನಲಾಗಿದೆ.
ಇದನ್ನು ಕಂಡ ಸ್ಥಳೀಯರು ವೃದ್ಧೆಯನ್ನು ಕೂಡಲೇ ನಿಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.


ಗ್ರಾಮಲೆಕ್ಕಿಗರ ವರ್ತನೆ ಬಗ್ಗೆ ಆಕ್ರೋಶಗೊಂಡ ಜನರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವಿ.ಎಸ್.ರಾಜೀವ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಗ್ರಾಮ ಲೆಕ್ಕಿಗ ಮಂಜಪ್ಪರನ್ನು ಬೇರೆಡೆ ವರ್ಗಾಯಿಸುವ ಮೂಲಕ ತಹಶೀಲ್ದಾರ್ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!