ಶಿವಮೊಗ್ಗ,
ರೋಗ ಮುಕ್ತ ಜೀವನವನ್ನು ನಡೆಸಲು ಪ್ರತಿನಿತ್ಯ ಧ್ಯಾನ ಮತ್ತು ಯೋಗ ಅಗತ್ಯ. ಮಾನಸಿಕವಾಗಿ ಬೌದ್ಧಿಕ ವಾಗಿ ಶಾರೀರಿಕವಾಗಿ ಸದೃಢವಾಗಿದ್ದರೆ ಉತ್ತಮ ಜೀವನ ಸಾಧ್ಯ ಯೋಗದಿಂದ ಸ್ವಾಸ್ಥ್ಯ ಸಮಾಜವನ್ನು ಕಟ್ಟಬಹುದು ಎಂದು ಕುವೆಂಪು ವಿವಿಯ ರಾಷ್ಟ್ರೀಯ ಸೇವಾ ಯೊಜನೆ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಹೇಳಿದರು.
ಅವರು ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿನಗರ, ಶಿವಮೊಗ್ಗ ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ಕ್ರಾಸ್ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಮತ್ತು ಪ್ರಾಣವಾಯು ಪ್ರತಿಯೊಬ್ಬರಿಗೂ ಅವಶ್ಯಕ ಯೋಗ ಅದ್ಬುತವಾದ ಒಂದು ಕ್ರಿಯೆ. ಆರೋಗ್ಯಕ್ಕಾಗಿ, ಉದ್ಯೋಗಕ್ಕಾಗಿ, ಸದೃಢಕ್ಕಾಗಿ ಪ್ರತಿನಿತ್ಯ ಯೋಗ ಮಾಡಬೇಕು. ಜೊತೆಗೆ ಪರಿಸರ ಜಾಗೃತಿ ಮೂಡಿಸುವುದನ್ನು ರೂಢಿಸಿಕೊಳ್ಳಿ ಎಂದು ಮನವರಿಕೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಂ.ಟಿ .ಮಂಜುನಾಥ್ ರವರು ಮಾತನಾಡಿ, ಯಾವುದು ಒಳ್ಳೆಯದಾಗಿರುತ್ತದೋ ಅದನ್ನು ಸ್ವೀಕರಿಸೋಣ ನಾವೆಲ್ಲರೂ ಪ್ರತಿ ನಿತ್ಯ ಸ್ವಲ್ಪ ಸಮಯ ಯೋಗ ಮತ್ತು ಕ್ರೀಡೆಗೆ ಮೀಸಲಿಡೋಣ ದೇಶ ಕಟ್ಟುವ ಕೇಲಸದ ಜೊತೆಗೆ ತಮ್ಮ ತನವನ್ನು ಬಿಟ್ಟು ಕೊಡದೇ ಕೆಲಸ ಮಾಡೋಣ. ಯೋಗ ಶಿಸ್ತು ಕ್ರಮವನ್ನು ಕಲಿಸುತ್ತದೆ. ಜೀವನದಲ್ಲಿ ಆಯುಷ್ಯವನ್ನು ವೃದ್ಧಿಸುವ ಒಂದು ಕಲೆ ಯೋಗದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ್ಯದರ್ಶಿ ವಿಜಯಕು ಮಾರ್, ಯೋಗ ತರಬೇತುದಾರ ಬಾ.ಸು.ಅರವಿಂದ್, ಪ್ರಾಂಶುಪಾಲರಾದ ಪ್ರೊ. ಧನಂಜಯ, ಕ್ರೀಡಾಸಂಚಾಲಕರಾದ ಪ್ರೊ.ಜಯಕೀರ್ತಿ, ಪ್ರೊ. ಹರೀಶ್, ರಾಷ್ಟ್ರೀಯ ಸೇವಾಯೋಜನೆಯ ಸಂಚಾಲಕಿ ಪ್ರೊ.ರೇಷ್ಮಾ, ರೆಡ್ಕ್ರಾಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರೊ.ರವಿ ಡಾ.ರಾಜೇಶ್ವರಿ ಮತ್ತಿತರರಿದ್ದರು.