ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರು ಕೃಷಿ ಪರಿಕರಗಳ ಖರೀದಿಯಲ್ಲಿ ತೊಡಗಿದ್ದು ಇಂದು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಹಾಗೂ ಸಿಬ್ಬಂದಿ ವರ್ಗ ಶಿಕಾರಿಪುರ ಟೌನ್ ವ್ಯಾಪ್ತಿಯ ಲ್ಲಿನ ಕೃಷಿ ಪರಿಕರಗಳ ಮಾರಾಟಗಾರರ ಮಳಿಗೆಗೆ ಭೇಟಿ ನೀಡಿ, ರಸಗೊಬ್ಬರಗಳ ದಾಸ್ತಾನು ಮತ್ತು ವಿತರಣೆಯನ್ನು ಪರಿಶೀಲಿಸಿದರು.


ರೈತರು ಖಾಸಗಿ ಮತ್ತು ಸಹಕಾರ ಸಂಘಗಳಲ್ಲಿ ಡಿಎಪಿ ರಸಗೊಬ್ಬರ ಕೋರಿ ಬರುತ್ತಿದ್ದಾರೆ. ತಾವುಗಳು ದಾಸ್ತಾನು ಇರುವುದಿಲ್ಲವೆಂದು ಹೇಳುತ್ತಿದ್ದೀರೆಂದು ಹಲವಾರು ದೂರುಗಳು ಬರುತ್ತಿವೆ

. ಆದ್ದರಿಂದ ಈ ರೀತಿ ತಪ್ಪು ಮಾಹಿತಿ ನೀಡುವುದು ಖಚಿತವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ರೈತರು ಕೇವಲ ಡಿಎಪಿ ರಸಗೊಬ್ಬರವನ್ನು ಉಪಯೋಗಿಸಿ ಬಿತ್ತನೆ ಮಾಡುವುದು ಸೂಕ್ತವಲ್ಲ, ಪೊಟ್ಯಾಷ್ ಸಂಯುಕ್ತ ರಸಗೊಬ್ಬರಗಳನ್ನು ಬಳಕೆ ಮಾಡುವಂತೆ ರೈತರಲ್ಲಿ ಮನವಿ ಮಾಡಿದರು.


ರೈತರಿಗೆ ಬಿತ್ತನೆ ಬೀಜ ತೆಗೆದುಕೊಂಡರೆ ಮಾತ್ರ ಗೊಬ್ಬರ ನೀಡುವುದಾಗಿ ತಿಳಿಸುತ್ತಿರುವುದು ಮತ್ತು ಅತೀಯಾದ ಇತರೆ ಮೈಕ್ರೋನ್ಯೂಟ್ರಿಯಂಟ್ ಮತ್ತು ಇತರೆ ಸಾವಯವ ವಸ್ತುಗಳನ್ನು ಲಿಂಕ್ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು ರೈತರಿಗೆ ರಸಗೊಬ್ಬರ ಕೋರಿ ಬಂದ ರೈತರಿಗೆ ಯಾವುದೇ ಇತರೆ ವಸ್ತುಗಳನ್ನು ಲಿಂಕ್ ಮಾಡಬಾರದು.

ಕೂಡಲೇ ಇದನ್ನು ನಿಲ್ಲಿಸಿ ರೈತರಿಗೆ ರಸಗೊಬ್ಬರ ವಿತರಣೆಯನ್ನು ಸಮರ್ಪಕವಾಗಿ ವಿತರಣೆ ಕೈಗೊಳ್ಳಲು ತಾಲ್ಲೂಕಿನ ಎಲ್ಲಾ ರಸಗೊಬ್ಬರ ಮಾರಾಟಗಾರರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಬಿತ್ತನೆ ಬೀಜ ಅಧಿನಿಯಮ, ೧೯೬೬ ಅಡಿ ರೈತರಿಗೆ ವಿತರಿಸುತ್ತಿರುವ ಬಿತ್ತನೆ ಬೀಜವನ್ನು ಗುಣ ನಿಯಂತ್ರಣ ಮಾದರಿಗಳನ್ನು ತೆಗೆಯಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!