ಶಿವಮೊಗ್ಗ,
ಸಮಾಜದಲ್ಲಿ ಎಲ್ಲರೂ ಕೂಡ ನೆಮ್ಮ ದಿಯಾಗಿ ಬದುಕಲು ಧಾರ್ಮಿಕ ಮಾರ್ಗ ದರ್ಶನ ಅಗತ್ಯವಾಗಿದ್ದು, ಇದಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆಯುವಂ ತಾಗಬೇಕೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.


ಶ್ರೀಗಂಧ ಸಂಸ್ಥೆ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ವ್ಯಾಸನಕೆರೆ ಪ್ರಭಂಜನಾಚಾರ್ಯರಿಂದ ಶುಕ್ರವಾರ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣ ಕುರಿತ ಉಪನ್ಯಾಸ ಹಾಗೂ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವ ಚನ ನೀಡಿದರು.
ಸಮಾಜದಲ್ಲಿ ಎಲ್ಲರೂ ಕೂಡ ನೆಮ್ಮದಿಯಾಗಿ ಬದುಕಬೇಕು. ಸುಖ ವಾಗಿರಬೇಕೆಂದು ಬಯಸುತ್ತಾರೆ. ತಾವೊಬ್ಬರ ಸುಖಕ್ಕಾಗಿ ಅನುಸರಿಸುವ ಮಾರ್ಗ ಬೇರೆಯವರ ದುಃಖಕ್ಕೆ ಕಾರಣವಾಗಬಾರದು. ಆ ರೀತಿ ಆದರೆ ಅದು ಧರ್ಮದ ಮಾರ್ಗವಾಗುವುದಿಲ್ಲ. ಎಲ್ಲರೂ ಧರ್ಮದ ದಾರಿ ಅನುಸರಿಸರಿಸಿದರೆ ಮಾತ್ರ ಸಮಾಜ ನೆಮ್ಮದಿ ಇರಲು ಸಾಧ್ಯ ಎಂದರು.


ಪ್ರತಿಯೊಬ್ಬನ ದುಃಖಕ್ಕೆ ಹಲವು ಕಾರಣಗಳಿರುತ್ತವೆ. ಆದರೆ ಸುಖಕ್ಕೆ ಧರ್ಮ ಮಾರ್ಗ ಹಾಗೂ ಸರಳ ಜೀವನ ಕಾರಣವಾಗಲಿದೆ. ಸನಾತನ ಸಂಸ್ಕೃತಿ ಸರ್ವ ಜನರು ಸುಖವಾಗಿರಬೇಕೆಂದು ಬಯಸುತ್ತದೆ. ಆ ನಿಟ್ಟಿನಲ್ಲಿ ಶ್ರೀ ಗಂಧ ಸಂಸ್ಥೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ಆರಂಭ ಮಾಡುವಾಗ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕೆಂದು ಪೇಜಾವರ ಶ್ರೀಗಳು ಹೇಳಿದ್ದರು. ಅದೇ ರೀತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.


ಲೇಖಕ ಹಾಗೂ ಅಂಕಣಕಾರ ಜಿ. ಕೃಷ್ಣಾನಂದ ಅವರ ಒಸುಳಿಯೊಗಿದು ಪುಸ್ತಕವನ್ನು ಪೇಜಾವರ ಶ್ರೀಗಳು ಬಿಡುಗಡೆ ಮಾಡಿದರು. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಿಡುಗಡೆ ಮಾಡಿದರು. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳನ್ನು ಹಾಗೂ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ದಂಪತಿಯನ್ನು ಸನ್ಮಾನಿಸಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!