ಶಿವಮೊಗ್ಗ,ಮೇ. 16:
ಕಣ್ಣಿದ್ದವರಿಗೇ ಯಾಮಾರಿಸಿ ನಾನಾ ವಾಮ ಮಾರ್ಗಗಳ ಮೂಲಕ ವಂಚಿಸುತ್ತಿರುವುದು ಈಗಿನ ದಿನಗಳಲ್ಲಿ ಮಾಮೂಲಿಯಾಗಿದೆ. ಆದರೆ, ಕಣ್ಣಿಲ್ಲದವರನ್ನು, ವಿಕಚೇತನರನ್ನು ಅನುಕಂಪದಿಂದ ನೋಡುಕೊಳ್ಳು ಮನೋನಬಾವ ಹೊಂದಿರುವವರ ಸಂಖ್ಯೆ ಹೆಚ್ಚಿದೆ ಎನ್ನಬಹಿಉದು. ಆದರೂ ಇಲ್ಲೊಬ್ಬ ದುರುಳ ಕಣ್ಣಿಲ್ಲದ ಅಂಧ ಮಹಿಳೆಯ ಖಾತೆಗೆ ಕನ್ನ ಜಾಕಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ನಿಮ್ಮ ಅಂಧರ ಸಂಸ್ಥೆಯವರಿಗೆ ಹಾಡಲು ಅವಕಾಶ ನೀಡುವುದಾಗಿ ನಂಬಿಸಿ ಸಂಸ್ಥೆಯನ್ನು ನಡೆಸುತ್ತಿರುವ ಅಂಧ ಮಹಿಳೆಗೆ ಇಲ್ಲಿ ವಂಚಿಸಲಾಗಿದೆ.
ಇಲ್ಲಿನ ತುಂಗಾ ನಗರದಲ್ಲಿ ನವಜ್ಯೋತಿ ಅಂಧರಸಂಸ್ಥೆ ನಡೆಸುತ್ತಾ ಬಂದಿರುವ ಕಸ್ತೂರಿ ಎಂಬುವರಿಗೆ ಬೆಂಗಳೂರಿನಲ್ಲಿರುವ ಅಪರಿಚಿತ ವ್ಯಕ್ತಿಯೊಬ್ಬ ಮಿಲ್ಟ್ರೀ ಕ್ಯಾಂಪ್ ನಿಂದ ಮಾತನಾಡುತ್ತಿರುವುದಾಗಿ ಹೇಳಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ, ನಮ್ಮ ಸಾರ್ ಒಬ್ವರು ರಿಟೈರ್ಡ್ ಆಗಿದ್ದಾರೆ. ಇವರ ರಿಟೈರ್ಡ್ ಮೆಂಟ್ ದಿನದಂದು ಬೀಳ್ಕೊಡುಗೆ ಸಮಾರಂಭಕ್ಕೆ ರಸಮಂಜರಿ ಹೇಳಿಸಬೇಕಿದೆ. ನೀವೇ ಹಾಡಬೇಕು ಎಂದು ಹೇಳಿದ್ದಾನೆ. ಕಾರ್ಯಕ್ರಮವನ್ನ ಕಸ್ತೂರಿಯವರೂ ಸಹ ಒಪ್ಪಿಕೊಂಡಿದ್ದಾರೆ. ಹಣಹಾಕುವುದಾಗಿ ನಂಬಿಸಿ ಅಪರಿಚಿತ ಬ್ಯಾಂಕ್ ಅಕೌಂಟ್ ಕೇಳಿದ್ದಾನೆ.
ಮಾಮೂಲಿಯಾಗಿ ಬ್ಯಾಂಕ್ ಅಕೌಂಟ್ ನೀಡಲು ಮುಂದಾದ ಕಸ್ತೂರಿಯವರಿಗೆ ಗೂಗಲ್ ಅಕೌಂಟ್ ಇದ್ದವರ ನಂಬರ್ ಕೊಡಿ ಎಂದು ನಂಬಿಸಿದ್ದಾನೆ. ಕಸ್ತೂರಿಯವರೂ ಸಹ ಕಣ್ಣು ಕಾಣದೆ ಇರುವ ಕಾರಣ ಪಕ್ಕದ ಮನೆ ಬಾಲಕಿಯಿಂದ ಗೂಗಲ್ ಪೇ ಸಿದ್ದಪಡಿಸಿಕೊಂಡು ಆತನಿಗೆ ಗೂಗಲ್ ಪೇಗೆ ಹಣ ಹಾಕಿ ಎಂದಿದ್ದಾರೆ. ಆತ ಒಟಿಪಿ ನಂಬರ್ ಕೇಳಿದ್ದಾನೆ.
ಒಟಿಪಿ ನಂಬರ್ ಪಡೆಯುತ್ತಿದ್ದಂತೆ ಆತ ಅವರ ಅಕೌಂಟ್ ನಂಬರ್ ನಿಂದ 30 ಸಾವಿರ ರೂ. ಹಣವನ್ನ ವರ್ಗಾಯಿಸಿದ್ದಾನೆ.
ಕೊರೋನ ಹಿನ್ನಲೆಯಲ್ಲಿ ಹಾಡುವ ಕಾರ್ಯಕ್ರಮಗಳೇ ರದ್ದಾಗಿದ್ದು ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಕಸ್ತೂರಿಯವರ ಬ್ಯಾಂಕ್ ಅಂಕೌಟ್ ನಿಂದ ಹಣ ವರ್ಗಾಯಿಸಿಕೊಂಡಿದ್ದಕ್ಕೆ ಕಣ್ಣೀರಿಟ್ಟಿದ್ದಾರೆ. ಕಸ್ತೂರಿಯವರ ಬ್ಯಾಂಕ್ ಅಕೌಂಟ್ ನಿಂದ 30 ಸಾವಿರ ರೂ. ಹಣ ವಂಚಿಸಿರುವ ಘಟನೆ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.