ಶಿವಮೊಗ್ಗ: ತಾಲೂಕಿನ ಚೋರಡಿಯಲ್ಲಿ ಇಬ್ಬರು ಮಕ್ಕಳಿಗೆ ನೇಣುಬಿಗಿದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಭಾನುವಾರ ನಡೆದಿದೆ.

ತಾಯಿ‌ ಜ್ಯೋತಿ (25) ಮಕ್ಕಳಾದ ಎರಡುವರೆ ವರ್ಷದ ಸಾನ್ವಿ ಹಾಗೂ ಒಂದು ವರ್ಷದ ಕುಶಾಲ್‌ನೊಂದಿಗೆ ನೇಣು ಬಿಗಿದುಕೊಂಡಿದ್ದಾರೆ.


ಹೊಲಕ್ಕೆ ಕೆಲಸಕ್ಕೆಂದು ಹೋದವರು ಮನೆಗೆ ವಾಪಸ್ ಆದ ಸಂದರ್ಭದಲ್ಲಿ ನಡೆದ ವಿಷಯ ಗೊತ್ತಾಗಿದೆ. ಜ್ಯೋತಿ ಸಾಸಿವೆಹಳ್ಳಿಯವರಾಗಿದ್ದು, ಮದುವೆಯಾಗಿ ಐದು ವರ್ಷವಾಗಿತ್ತು. ಕೌಟುಂಬಿಕ ಕಲಹ ಘಟನೆಗೆ ಕಾರಣದಿಂದ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!