ಶಿವಮೊಗ್ಗ, ಮೇ.12:
ತೀರ್ಥಹಳ್ಳಿ ತಾಲ್ಲೂಕಿನ ವಾಸಿ 26 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ಆನಾರೋಗ್ಯದ ಕಾರಣದಿಂದಾಗಿ ತೀರ್ಥಹಳ್ಳಿಯ ತಮ್ಮ ಪರಿಚಿತ ವೈದ್ಯರ ಬಳಿ ಹೋಗಿದ್ದು, ಆದರೆ ಅವರು ಸಿಗದ ಕಾರಣ ಹಳೆ ಔಷದಿ ಚೀಟಿಯನ್ನು ತೋರಿಸಿ ಔಷದಿಯನ್ನು ಖರೀದಿಸಿ ತನ್ನ ಗಂಡನೊಂದಿಗೆ ರಾತ್ರಿ 09:00 ಗಂಟೆಗೆ ಬಸ್ ನಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮ ಊರಿಗೆ ವಾಪಾಸ್ ಬಂದು ಬಸ್ ನಿಂದ ಇಳಿದು, ನಡೆದು ಕೊಂಡು ಹೋಗುತ್ತಿದ್ದಾಗ ಊರಿನ ಹತ್ತಿರ ಏಕಾಏಕಿ ನಾಲ್ವರು ಪತಿಗೆ ಹಲ್ಲೆ ಮಾಡಿ, ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬೆದರಿಕೆ ಹಾಕಿ ಜನ ಬರುತ್ತಾರೆಂದು ಓಡಿ ಹೋಗಿರುವ ಘಟನೆ ನಡೆದಿದೆ.
ದೇವರಗುಡಿ ಗ್ರಾಮದ ನಿವಾಸಿಗಳಾದ ಸಂಪತ್, ಆದರ್ಶ ಮತ್ತು ಇತರೆ 02 ಜನ ಅಪರಿಚಿತರು ಬಂದು ಅಡ್ಡಗಟ್ಟಿ ಆಕೆಯ ಗಂಡನಿಗೆ ಹಲ್ಲೆ ಮಾಡಿ ರಕ್ತಗಾಯ ಪಡಿಸಿದ್ದು ಆತನನ್ನು ಪ್ರಜ್ಞಾಹೀನನನ್ನಾಗಿ ಮಾಡಿ ನಂತರ ಮಹಿಳೆಯ ಕೈ ಹಿಡಿದು ಪಕ್ಕದ ರಬ್ಬರ್ ಪ್ಲಾಂಟೇಷನ್ ಗೆ ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದರು.


ಮಹಿಳೆಯು ಜೋರಾಗಿ ಕೂಗಿಕೊಂಡ ಶಬ್ದಕ್ಕೆ ಆಕೆಯ ಪತಿಯು ಎಚ್ಚರಗೊಂಡು ಆತನು ಸಹಾ ಜೋರಾಗಿ ಕೂಗಿದಾಗ ಆರೋಪಿಗಳೆಲ್ಲರೂ ಆಕೆಗೆ ನಿನ್ನನ್ನು ಅತ್ಯಾಚಾರ ಮಾಡದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಅಲ್ಲಿಂದ ಓಡಿಹೋಗಿದ್ದಾರೆ.
ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0088/2022 ಕಲಂ 341, 323, 376, 354(A), 354(B), 506 ಸಹಿತ 34 ಐಪಿಸಿ ಹಾಗೂ ಕಲಂ 3 (1) (w) (i) (ii), 3 (2) (va) The SC & ST (POA) Act ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುವ ತೀರ್ಥ ಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..

By admin

ನಿಮ್ಮದೊಂದು ಉತ್ತರ

error: Content is protected !!