ಸಾಗರ, ಮೇ.೦೯:
ನಮ್ಮ ಪೂರ್ವಿಕರು ಭಗೀರಥನ ಮೂಲಕ ನೀರಿನ ಮಹತ್ವವನ್ನು ಜನಮಾನಸದಲ್ಲಿ ಬಿತ್ತುವ ಕೆಲಸ ಮಾಡಿದ್ದಾರೆ. ನೀರನ್ನು ಅಶುದ್ದಗೊಳಿಸದೆ, ಅಪವ್ಯಯ ಮಾಡದೆ ಉಳಿಸಿ ಕೊಂಡು ಹೋಗುವ ಸಂಕಲ್ಪವನ್ನು ಭಗೀರಥ ಜಯಂತಿಯಂದು ಕೈಗೊಳ್ಳಬೇಕು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಗಂಗೆಯನ್ನು ಭೂಮಿಗೆ ತರಲು ಭಗೀರಥ ಚಕ್ರವರ್ತಿ ಮಾಡಿದ ಪ್ರಯತ್ನ ಅನುಕರಣೀಯವಾದದ್ದು. ಅನೇಕ ಸವಾಲುಗಳನ್ನು ಎದುರಿಸಿ ದೇವಗಂಗೆಯನ್ನು ಭೂಮಿಗೆ ತಂದ ಭಗೀರಥ ಮಹರ್ಷಿ ಜೀವನ ವೃತ್ತಾಂತವನ್ನು ತಿಳಿದುಕೊಳ್ಳುವುದರ ಜೊತೆಜೊತೆಗೆ ನಾವು ನೀರಿನ ಮಹತ್ವವನ್ನು ಅರಿತುಕೊಳ್ಳುವ ಕಾಲಘಟ್ಟ ಇದಾಗಿದೆ. ಶುದ್ದ ನೀರನ್ನು ಕಾಪಾಡಿಕೊಳ್ಳುವ ಮೂಲಕ ನಾವು ಭಗೀರಥ ಮಹರ್ಷಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.
ಭಗೀರಥ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಸದಾನಂದ ಶರ್ಮ, ಭಾರತೀಯ ನಾಗರೀಕತೆಯಲ್ಲಿ ಗಂಗಾನದಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು.


ನಗರಸಭಾ ಸದಸ್ಯ ಸಂತೋಷ್ ಶೇಟ್ ಮಾತನಾಡಿದರು. ಉಪ್ಪಾರ ಸಮಾಜದ ಅಧ್ಯಕ್ಷ ಟಿ.ರಾಮಪ್ಪ, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಉಪ ತಹಶೀಲ್ದಾರ್ ಪರಮೇಶ್ವರ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಬಸವರಾಜ್, ಪ್ರಮುಖರಾದ ಈಶ್ವರ್, ಸುರೇಶ್ ಕಂಬಳಿ, ಕೃಷ್ಣ ಆರ್. ಶೇಟ್, ಚೇತನರಾಜ್ ಕಣ್ಣೂರು ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!